ದಾವಣಗೆರೆ: ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM ) ಪಕ್ಷವು ಸಂಘಟನೆ ಮಾಡಲು ದಾವಣಗೆರೆ ಜಿಲ್ಲೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಯನ್ನು ಪುನಃ ರಚನೆ. ಮಾಡಿದೆ ಎರಡನೇ ಬಾರಿಗೆ ಮುಹಮ್ಮದ್ ಅಲಿ ಶೋಯಿಬ್ ಅವರು ಜಿಲ್ಲಾ ಅಧ್ಯಕ್ಷರಾಗಿ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು AIMIM ರಾಜ್ಯಾಧ್ಯಕ್ಷ ನೆಮಕ ಪತ್ರ ನೀಡಿದರೆ. ಹೊಸದಾಗಿ ರಚಿಸಲಾದ ಜಿಲ್ಲಾ ಕಮಿಟಿಯ ಪ್ರಮುಖ ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ:ಜಿಲ್ಲಾ ಅಧ್ಯಕ್ಷರು: ಮುಹಮ್ಮದ್ ಅಲಿ ಶೋಯೇಬ್ ಜಿಲ್ಲಾ ಕಾರ್ಯದರ್ಶಿ: ಮುಹಮ್ಮದ್ ಅಜ್ಮತ್ ಉಲ್ಲಾಜಂಟಿ ಕಾರ್ಯದರ್ಶಿ: ಮೊಹಮ್ಮದ್ ತಹೀರ್ ಅಲಿಖಜಾಂಚಿ: ಮೊಹಮ್ಮದ್ ಸನಾಉಲ್ಲಾಸಂಘಟನಾ ಕಾರ್ಯದರ್ಶಿ: ಮೌಲಾನಾ ಏಜಾಜ್ ರಜಾ ಕಾದ್ರಿಜಿಲ್ಲಾ ಕಮಿಟಿಯ ಸದಸ್ಯರಾಗಿ ಮುಹಮ್ಮದ್ ಶುಐಬ್ ಅಖ್ತರ್, ಹಫಿಜ್ ಮೊಹಮ್ಮದ್ ಜವೀದ್, ಶೋಕತ್ ಅಲಿ, ಮನ್ಸೂರ್ ಅಲಿ, ಮುಹಮ್ಮದ್ ಅಫ್ತಾಬ್ ಮತ್ತು ಮುಹಮ್ಮದ್ ಫುರ್ಖಾನ್ ಅವರನ್ನು ನೇಮಕ ಮಾಡಲಾಗಿದೆ.ರಾಜ್ಯಾಧ್ಯಕ್ಷ ರಾದ ಲತೀಫ್ ಖಾನ್ ಅಮೀರ್ ಖಾನ್ ಪಠಾನ್ ಅವರು ಅಧಿಕೃತ ಒಪ್ಪಿಗೆ ಪತ್ರ ನೀಡಿದ್ದಾರೆ ಜಿಲ್ಲಾ ಸಮಿತಿಯನ್ನು 09 ಅಕ್ಟೋಬರ್ 2025ರಂದು ಬೆಳಗಾವಿಯಲ್ಲಿ ರಚಿಸಲಾಯಿತು ಎಂದು ತಿಳಿಸಿದರೆ. ದಲಿತ. ಹಿಂದುಳಿದ. ಅಲ್ಪಸಂಖ್ಯಾತ. ಮಹಿಳೆಯರ. ಯುವ. ವಿದ್ಯಾರ್ಥಿಗಳ ಹಾಗೂ ಎಲ್ಲ ಬಡವರ ಧ್ವನಿ ಯಾಗಿ ಪಕ್ಷದ ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ನೂತನ ಅಧ್ಯಕ್ಷರಾದ ಮಹಮ್ಮದ್ ಅಲಿ ಶೋಯೇಬ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.