ದಾವಣಗೆರೆ, ನಗರವು ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯಲು ಪಾಲಿಕೆ ಮತ್ತು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿರುತ್ತಾರೆ. ಆದಾಗ್ಯೂ, ನಗರದ ಇನ್ನು ಹಲವು ಭಾಗದಲ್ಲಿ ಹಸಿಕಸ- ಒಣಕಸ-ಸ್ಯಾನಿಟರಿ ಕಸಗಳನ್ನು ವಿಂಗಡಣೆ ಮಾಡದೇ ಇರುವುದು, ಕಸ ಸಂಗ್ರಹಣಾ ವಾಹನಗಳಿಗೆ ಕಸ ನೀಡದೇ ರಾತ್ರಿ ಮತ್ತು ಮುಂಜಾನೆ ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುತ್ತಿರುವ ಪ್ರಕರಣಗಳು ಕಂಡು ಬಂದಿರುತ್ತವೆ.ಸ್ವಚ್ಛ ಭಾರತ ಮಿಷನ್-2.0 ರಡಿ ಸ್ವ-ಸಹಾಯ ಗುಂಪುಗಳ ಸದಸ್ಯರುಗಳನ್ನು, ಸಮುದಾಯ ಸಂಚಾಲಕರು ಎಂದು ಪ್ರತಿ ತ್ಯಾಜ್ಯ ಸಂಗ್ರಹಣಾ ವಾಹನಗಳೊಂದಿಗೆ ನೇಮಕ ಮಾಡಲಾಗಿದೆ. ತ್ಯಾಜ್ಯ ವಿಂಗಡಣೆ ಮಾಡದೇ ಇರುವ ಹಾಗೂ ಕಸ ಸಂಗ್ರಹಣಾ ವಾಹನಗಳಿಗೆ ಕಸ ನೀಡದೇ ಇರುವಂತಹ ಮನೆ, ಉದ್ದಿಮೆದಾರರುಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಪ್ರಾರಂಭಿಕವಾಗಿ ನಗರದ ಸ್ವಚ್ಚತೆಗೆ ಧಕ್ಕೆಯುಂಟಾಗುವಂತೆ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸುತ್ತಿರುವವರಿಗೆ ತಿಳುವಳಿಕೆ ನೀಡಿ, ನಂತರವೂ ಉಲ್ಲಂಘನೆ ಮುಂದುವರೆಸಿದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ತ್ಯಾಜ್ಯ ನಿರ್ವಹಣೆ ಉಪ ವಿಧಿಗಳಲ್ಲಿ ಪ್ರತಿ ಉಲ್ಲಂಘನೆಗೆ ರೂ. 100.00 ರಿಂದ ರೂ. 500.00 ಗಳ ವರೆಗಿನ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.ದಂಡ ಪಾವತಿಸದೇ ಇದ್ದಲ್ಲಿ ದಂಡದ ಮೊತ್ತವನ್ನು ಆಸ್ತಿ ತೆರಿಗೆ ಬಾಕಿ ರೂಪದಲ್ಲಿ ವಸೂಲಿಸಲಾಗುವುದು. ಪ್ರಯುಕ್ತ, ಮನೆಗಳನ್ನು ಬಾಡಿಗೆ ನೀಡಿರುವಂತಹ ಮನೆ ಮಾಲೀಕರು ಬಾಡಿಗೆದಾರರುಗಳಿಗೆ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆ ಬಗ್ಗೆ ಅಗತ್ಯ ಷರತ್ತು ವಿಧಿಸಿ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಪಾಲಿಕೆಯೊಂದಿಗೆ ಕೈಜೋಡಿಸಿಸುವುದು.