ಜಯಶಾಂತ ಕಟ್ಟಡ ಕಾರ್ಮಿಕರ ಸಂಘ ಉದ್ಘಾಟನೆ ಮತ್ತು ಸಂಘದ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮ

Spread the love

ಹರಿಹರ : ಜಯ ಶಾಂತ ಕಟ್ಟಡ ಕಾರ್ಮಿಕರ ಸಂಘ ರಿ ಹರಿಹರ ಸಂಘದ ಉದ್ಘಾಟನಾ ಮತ್ತು ಸಂಘದ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಹರಿಹರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಯಿತು,* ಈ ಸಂಘದ ಉದ್ಘಾಟನೆಯನ್ನು ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಎನ್ ಹೆಚ್ ಶ್ರೀನಿವಾಸ ಅವರು ಉದ್ಘಾಟಿಸಿ ಮಾತನಾಡಿದರು ಕಾರ್ಮಿಕರಿಗೆ ವಿವಿಧ ರೀತಿಯಾದ ಸೌಕರ್ಯವನ್ನು ಸರ್ಕಾರಿ ದಿಂದ ಕೊಡಿಸುವ ಕೆಲಸವನ್ನು ನಾನು ಸಚಿವರ ಜೊತೆಗೆ ಮಾತನಾಡುತ್ತೇನೆ ಅಂತ ಹೇಳಿ ಭರವಸೆ ನೀಡಿದರು ಹಾಗೆ ಕಾರ್ಮಿಕರಿಗೆ ವಸತಿಯನ್ನು ಮತ್ತು ಕಾರ್ಮಿಕರಿಗೆ ಲೋನ್ ನೀಡುವುದರ ಬಗ್ಗೆ ಪ್ರಪೋಸಲ್ ಕಳಿಸುತ್ತೇನೆ ಎಂದು ಹೇಳಿದರು, ಜಯ ಶಾಂತ ಕಟ್ಟಡ ಕಾರ್ಮಿಕರ ಸಂಘದ ಸಂಸ್ಥಾಪಕರು ಶಶಿ ನಾಯ್ಕ್ ಮಾತನಾಡಿ ಕಾರ್ಮಿಕ ಇಲಾಖೆ ವತಿಯಿಂದ ವಿವಿಧ ರೀತಿಯ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಸಂಘವನ್ನು ಸ್ಥಾಪನೆ ಮಾಡಲಾಗಿದೆ ಹಾಗೂ ನಿಜವಾದ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸೇವೆ ಮಾಡಲು ಮುಂದಾಗುತ್ತಿದೆ ಹಾಗೆ ಕಾರ್ಮಿಕರ ಕ್ಷೇಮಾಭಿವೃದ್ಧಿಯ ಕಡೆಗೆ ಗಮನ ಒರೆಸಿ ಉರುಸುವಲ್ಲಿ ಈ ಸಂಘವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಲು ಬಯಸುತ್ತೇನೆ ಕಾರ್ಮಿಕ ಇಲಾಖೆ ವತಿಯಿಂದ ವಿವಿಧ ರೀತಿಯ ಸಂಘಟನೆ ಮತ್ತು ಅಸಂಘಟಿತ ವಲಯಗಳಿಗೆ ಹಲವಾರು ರೀತಿಯ ಸೌಕರ್ಯಗಳನ್ನು ನಾವೆಲ್ಲ ನಿಂತು ಕೊಡುಸುವಲ್ಲಿ ಪಾತ್ರರಾಗುತ್ತೇವೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಮುಸ್ತಾಫ, ಮಹಬೂಬ್ ಖಾನ್ , ಮಹಬೂಬ್ ಅಲಿ ಕೆ ಪಿ, ಸೈಯದ್ ಇಬ್ರಾಹಿಂ ಮುಬಾರಕ್ ಚಮನ ಜಬಿವುಲ್ಲಾ , ಚಮನ್ ಶರೀಫ್ ಮೊಮ್ಮದ್ ರಫೀಕ್, ಫಯಾಜ್ ಅಹ್ಮದ್ ಹನುಮಂತ ನಾಯಕ್ ಪ್ರಭು ಇನ್ನು ಹಲವಾರು ಕಾರ್ಮಿಕರು ಉಪಸ್ಥಿತರಿದ್ದರು ವರದಿ ಶೇಕ್ ಅಲ್ತಾಫ್ ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ

Leave a Reply

Your email address will not be published. Required fields are marked *