ಬಕ್ರೀದ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಸಭೆಯನ್ನು ಬುಧವಾರ ಆಯೋಜಿಸಲಾಯಿತು.ವೃತ್ತ ನಿರೀಕ್ಷಕ ಆರ್ ಎಫ್ ದೇಸಾಯಿ ಮಾತನಾಡಿ , ‘ಯಾವುದೇ ವದಂತಿಗಳಿಗೆ ಕಿವಿಗೊಡದೆ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು’ ಎಂದು ಹೇಳಿದರು.ಹಬ್ಬ ಆಚರಣೆಗೆ ಸರ್ಕಾರ ಹಾಗೂ ಸ್ಥಳೀಯ ಆಡಳಿತ ವಿಧಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಸಮುದಾಯವು ಶಿಸ್ತಿನಿಂದ ಹಬ್ಬ ಆಚರಿಸಬೇಕು. ಯಾವುದೇ ಗೊಂದಲ ಅಥವಾ ಅನುಮಾನಾಸ್ಪದ ಘಟನೆ ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.ಶಾಂತಿ ಸಭೆಯಲ್ಲಿ ಪೌರಾಯುಕ್ತ ಈರಮ್ಮ ವಿ. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಆರ್ ಸಿ ಜಾವೀದ್, ಪ್ರಧಾನ ಕಾರ್ಯದರ್ಶಿ ಆಸಿಫ್ ಜುನೇಧಿ, ಫಯಾಜ್ ಅರಿಯಂತ್, ಫಿರೋಜ್, ರಿಯಾಜ್, ದೇವೇಂದ್ರಪ್ಪ ಎಂ.ಎಸ್ ಬಾಬುಲಾಲ್, ಮುಸ್ತಫ ಆರ್,. ಮಾಂತೇಶ್ ಭಂಡಾರಿ, ಗೋಪಾಲ್, ಸೇರಿದಂತೆ ಹಿಂದೂ ಮುಸ್ಲಿಂ ಬಾಂಧವರು ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.