ಪ್ರವಾದಿ ಮಹಮದ್ ಪೈಗಂಬರರನ್ನು ಸ್ವಾಮಿ ನರಸಿಂಗನಂದ ಅವರು ಅವಹೇಳನ ಮಾಡಿದ್ದಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಇಲ್ಲಿನ ಅಂಜುಮನ್ – ಎ ಇಸ್ಲಾಮಿಯ ಸಂಸ್ಥೆಯ ನೇತೃತ್ವದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿ ಪೋಲಿಸ್ ಇನ್ಸ್ಪೆಕ್ಟರ್ ದೇವಾನಂದ ಅವರಿಗೆ ದೂರು ದಾಖಲಿಸುವಂತೆ ಮನವಿ ಸಲ್ಲಿಸಿದರು. ಧರ್ಮ ಗುರುಗಳಾದ ಸೈಯದ್ ಶಂಸುದ್ದೀನ್ ಮೌಲಾನ ಅವರು ಮಾತನಾಡಿ
ಸ್ವಾಮಿ ನರಸಿಂಹಾನಂದ ಅವರು ಮುಸ್ಲಿಮರು ಮತ್ತು ಪ್ರವಾದಿ ಮೊಹ್ಮದ್ ಪೈಗಂಬರರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದ್ದಾರೆ. ಮುಸ್ಲಿಮರ ಬಗ್ಗೆ ಇವರು ಈ ಹಿಂದೆ ಕೂಡಾ ಅನೇಕ ಸಂದರ್ಭಗಳಲ್ಲಿ ದ್ವೇಷ ಭಾಷಣ ಮಾಡಿದ್ದು ಸಮುದಾಯವನ್ನು ಕೆಣಕುವ ಹಾಗೂ ಆ ಮೂಲಕ ಗಲಭೆ ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ. ಬೇರೆ ಬೇರೆ ಸಮುದಾಯದವರಲ್ಲಿ ದ್ವೇಷ ಹುಟ್ಟುವಂತೆ ಮಾತುಗಳನ್ನಾಡುವ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಹುನ್ನಾರ ಇವರದ್ದಾಗಿದೆ. ನರಸಿಂಗನಂದ ಅವರು ಹಲವು ಬಾರಿ ಮುಸ್ಲಿಮರ ಬಗ್ಗೆ ಇಲ್ಲಸಲ್ಲದ ಭಾಷಣ ಮಾಡಿ ಸಮುದಾಯದವರಿಗೆ ನೋವನ್ನುಂಟು ಮಾಡಿದ್ದಾರೆ. ಪ್ರವಾದಿ ಮೊಹ್ಮದ ಪೈಗಂಬರರ ಬಗ್ಗೆ ತಮ್ಮ ಅವಹೇಳನಕಾರಿ ಭಾಷಣವನ್ನು ಮುಂದುವರಿಸಿರುವುದು ತೀರಾ ಖಂಡನೀಯ. ಪ್ರವಾದಿ ಮತ್ತು ಮುಸ್ಲಿಮರ ವಿರುದ್ದ ಪದೇ ಪದೇ ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಸ್ವಾಮಿ ನರಸಿಂಗ ನಂದರನ್ನು ತತ್ ಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಂಜುಮನ್ – ಎ ಇಸ್ಲಾಮಿಯಾ ಅಧ್ಯಕ್ಷ ಏಜಾಜ್ ಅಹಮದ್ ಮಾತನಾಡಿ ‘ಪ್ರವಾಸಿ ಮೊಹ್ಮದ್ ಪೈಗಂಬರರ ವಿರುದ್ದ ಅವಹೇಳನಕಾರಿ ಭಾಷಣ ಯಾರೇ ಮಾಡಿದರೂ ಸಹಿಸಲು ಸಾಧ್ಯವಿಲ್ಲ. ಅವಹೇಳನಕಾರಿ ಭಾಷಣದಿಂದ ಮುಸ್ಲೀಮ ಸಮುದಾಯಕ್ಕೆ ನೋವಾಗಿದೆ. ಪ್ರವಾದಿ ಮತ್ತು ಮುಸ್ಲಿಮರ ಬಗ್ಗೆ ಪದೇ ಪದೇ ಅವಹೇಳನಕಾರಿ ಹೇಳಿಕೆ ಕೇಳಿ ಬರುತ್ತಿದೆ. ಸಮಾಜದ ಶಾಂತಿ ಕದಡುವ ಇಂತಹವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅವರು ಮನವಿ ಸ್ವೀಕರಿಸಿ ಸರಕಾರಕ್ಕೆ ಕಳುಹಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳು, ವಿವಿಧ ಮುಸ್ಲಿಂ ಸಂಘಟನೆಗಳ ಪ್ರಮುಖರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಯುಎಪಿಎ ಮತ್ತು ಎನ್.ಎಸ್.ಎ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಅಂಜುಮನ್ – ಎ ಇಸ್ಲಾಮಿಯಾ ಸಂಸ್ಥೆಯ ನೇತೃತ್ವದಲ್ಲಿ ಹರಿಹರ ನಗರ ಠಾಣೆಗೆ ಭೇಟಿ ನೀಡಿ ಯತಿ ನರಸಿಂಗನಂದಾ ಸ್ವಾಮಿಯ ವಿರುದ್ಧ ಪೊಲೀಸ್ ಇನ್ಸ್ಪೆಕ್ಟರ್ ದೇವಾನಂದ ಅವರಲ್ಲಿ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಆಸಿಫ್ ಜುನೀದಿ, ಖಜಾಂಚಿ ಫಯಾಜ್ ಅರಿಹಂತ್, ಸದಸ್ಯರುಗಳಾದ ಎಂ ಆರ್ ಮುಜಮಿಲ್, ಅಪ್ರೋಜ್, ರೋಷನ್ ಜಮೀರ್, ಗೌಸ್,
ಹಾಗೂ ವಿವಿಧ ಜಮಾಅತ್‌ನ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ
ಯಮನೂರ್