ಅಹಿಂದ ವಿಚಾರವನ್ನು ಹೊಂದಿರುವಂತಹ ಸಿದ್ದರಾಮಯ್ಯನವರು ಇಂದು ಕೋಮುವಾದಕ್ಕೆ ತಲೆಬಾಗಿದ್ದಾರ?: ಎಂ.ಐ.ಎಂ ಶೋಯಬ್
ಕರ್ನಾಟಕದಲ್ಲಿ ಕೋಮುವಾದ ತಲೆಯೆತ್ತಿ ರಾರಾಜಿಸುತ್ತಿರುವಾಗ ರಾಜ್ಯ ಸರ್ಕಾರ ಮೂಕ ಪ್ರೇಕ್ಷಕರಾಗಿ ಕುಳಿತಿದ್ದೆ. ಈ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬಹಳಷ್ಟು ಪ್ರಶ್ನೆಗಳು ಉದ್ಭವಾಗುತ್ತಿವೆ. ಅಹಿಂದ ವಿಚಾರವನ್ನು ಹೊಂದಿರುವಂತಹ ಸಿದ್ದರಾಮಯ್ಯನವರು ಇಂದು ಕೋಮುವಾದಕ್ಕೆ ತಲೆಬಾಗಿದ್ದಾರ? ಕಾಂಗ್ರೆಸ್ ಸರ್ಕಾರ ಬಿಜೆಪಿಯ ಭಯದಲ್ಲಿ ಇದೆಯಾ? ಅಥವಾ ಕಾಂಗ್ರೆಸ್ ಮತ್ತು ಬಿಜೆಪಿಯ ಹೊಂದಾಣಿಕೆಯೊಂದಿಗೆ ಸರಕಾರ ನಡೆಸುತ್ತಿದ್ದಾರ? ಕಾಂಗ್ರೆಸ್ ಪಕ್ಷಕ್ಕೆ ಸ್ವತಂತ್ರ ಹೋರಾಟಗಾರರ ಮೇಲೆ ಯಾವುದೇ ಕಾಳಜಿ ಇಲ್ವಾ ? ಈ ಎಲ್ಲಾ ಪ್ರಶ್ನೆಗಳು ಉದ್ಭವವಾಗುವ ಕಾರಣ, 2023 ವಿಧಾನಸಭಾ ಚುನಾವಣೆಯ ತಮ್ಮ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಬಜರಂಗದಳವನ್ನು ಬ್ಯಾನ್ ಮಾಡುವ ಆಶ್ವಾಸನೆಯನ್ನು ಕೊಟ್ಟಿತ್ತು. ಬ್ಯಾನ್ ಮಾಡುವ ಮಾತು ಬಹಳ ದೂರ ಬಾಯಿಗೆ ಬಂದಂತೆ ಮಾತನಾಡುತ್ತಿರುವ ವಿಜಯಪುರದ ಶಾಸಕ ಯತ್ನಾಳ್ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ವಿಫಲವಾಗುತ್ತಿರುವ ಈ ಸರ್ಕಾರ ಕೋಮುವಾದಿಗಳಿಗೆ ಶರಣು ಕೊಡುತ್ತಿದೆ.
ಕೋಮುವಾದಿತ್ವದ ದೂತ ಯತ್ನಾಳ್ ತನ್ನ ನಾಲಿಗೆಯಿಂದ ಸದಾ ಸಮಾಜದ ಶಾಂತಿಯನ್ನು ಭಂಗ ಮಾಡುವಂತಹ ಮಾತುಗಳ ಪ್ರಯೋಗ ಮಾಡುತ್ತಿದ್ದಾನೆ ಕೆಲವು ದಿನಗಳ ಹಿಂದೆ ಕರುನಾಡಿನ ಹೆಮ್ಮೆ ಮೈಸೂರು ಹುಲಿ ಸ್ವತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ ವಿರುದ್ಧ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಸ್ವತಂತ್ರ ಹೋರಾಟಕ್ಕಾಗಿ ತನ್ನ ಪ್ರಾಣವನ್ನು ಅರ್ಪಣೆ ಮಾಡಿದಂತಹ ಆ ಮಹಾನ್ ಯೋಧನನ್ನು ಅಪಮಾನ ಮಾಡಿದ್ದಾನೆ. ಆದರೆ ಟಿಪ್ಪು ವೇಷ ಧರಿಸಿ ತಾವು ಟಿಪ್ಪು ಸುಲ್ತಾನಿನ ಅಭಿಮಾನಿಗಳೆಂದು ತೋರಿಸುವಂತಹ ಸಿದ್ದರಾಮಯ್ಯನವರು ಇಂದು ಸುಮ್ಮನಿರುವ ಕಾರಣವೇನು. ಸಿದ್ದರಾಮಯ್ಯನವರಾಗಲಿ ಕಾಂಗ್ರೆಸ್ನ ನಾಯಕರಿಗೆ ಟಿಪ್ಪು ಸುಲ್ತಾನರ ಮೇಲೆ ಯಾವುದೇ ಅಭಿಮಾನವಿಲ್ಲ ಬದಲಿಗೆ ಮುಸಲ್ಮಾನರ ವೋಟನ್ನು ಪಡೆಯಲಿಕ್ಕಾಗಿ ಮಾಡುವಂತಹ ಇದೊಂದು ನಾಟಕವಾಗಿದೆ ನಿಜಕ್ಕೂ ನಿಮ್ಮಲ್ಲಿ ಸ್ವತಂತ್ರ ಹೋರಾಟಗಾರರ ಮೇಲೆ ಅಭಿಮಾನವಿರುತ್ತಿದ್ದರೆ ತಾವು ಈ ನಾಲಾಯಕ್ ಯತ್ನಾಳ್ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕಾಗಿತ್ತು. ನಿಮ್ಮ ಪರಿಸ್ಥಿತಿಯನ್ನು ಗಮನಿಸಿದರೆ ತಮ್ಮ ರಾಜಕೀಯ ಲಾಭಕ್ಕಾಗಿ ಈ ಕೋಮುವಾದಿಗಳನ್ನು ತಾವೇ ಬೆಳೆಸುತ್ತಿದ್ದೀರಾ ಎಂಬುವುದು ಸ್ಪಷ್ಟವಾಗುತ್ತಿದೆ.
ನೆನ್ನೆ ವಿಜಯಪುರದಲ್ಲಿ ವಫ್ ವಿರುದ್ಧ ನಡೆದಂತಹ ಸಭೆಯಲ್ಲಿ ಮುಸಲ್ಮಾನರ ವಿರುದ್ಧ ಅವಾಚ್ಯ ಶಬ್ದವನ್ನು ಉಪಯೋಗಿಸಿ ಸಾರ್ವಜನಿಕವಾಗಿ ಶಸ್ತ್ರಗಳನ್ನು ಹಿಂದುಗಳು ತಮ್ಮ ಮನೆಯಲ್ಲಿ ಇಡಬೇಕೆಂದು ಪ್ರೇರೇಪಿಸುತ್ತಿರುವ ಹಾಗೂ ಕೋಮು ಬೀಜವನ್ನು ಬಿತ್ತುತ್ತಿರುವ ಸಮಾಜದ ಶಾಂತಿಯನ್ನು ಹದಗೆಡಿಸುತ್ತಿರುವ ಸಮಾಜದ ಶಾಂತಿ ವಿರೋಧಿ ಕೋಮುವಾದಿ ಯತ್ನಾಳ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಲ್ಲಿ ವಿಫಲವಾಗಿತ್ತಿರುವ ಸಿದ್ದರಾಮಯ್ಯ ಸರ್ಕಾರ ಇದು ಬಿಜೆಪಿ ಒಟ್ಟಿಗೆ ಅಡ್ಜಸ್ಟ್ಮೆಂಟ್ ಮಾಡಿಕೊಂಡಿರುವಂತಹ ಸರ್ಕಾರವಾಗಿದೆ.
ನಮಗೆ ಸ್ಪಷ್ಟವಾಗುವಂತಹ ವಿಷಯವೇನೆಂದರೆ ಬಿಜೆಪಿ ಹಾಗೂ ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳಾಗಿವೆ. ಇವರಿಬ್ಬರ ಉದ್ದೇಶ ಮುಸಲ್ಮಾನರ ಮೇಲೆ ದೌರ್ಜನ್ಯ ಮಾಡುವಂತಹಾಗಿದೆ. ಸೆಕ್ಯುಲರಿಸಂ ಹೆಸರಿನಲ್ಲಿ ಮುಸಲ್ಮಾನರ ವೋಟು ಪಡೆಯುವಂತಹ ಕಾಂಗ್ರೆಸ್ ಪಕ್ಷಕ್ಕೆ ಮುಸಲ್ಮಾನರ ವೋಟಲ್ಲಿ ಕಾಳಜಿ ಇದೆ ಆದರೆ ಮುಸಲ್ಮಾನರ ಮೇಲಿಲ್ಲ. ಇದರಿಂದ ನಿಮ್ಮ ಸೆಕ್ಯುಲರಿಸಂ ಮುಖವಾಡದ ಹಿಂದೆ ಇರುವಂತಹ ಕೋಮುವಾದಿತ್ವ ಪ್ರತಿಬಿಂಬಿಸುತ್ತಿದೆ. ಮುಂಬರುವ ದಿನಗಳಲ್ಲಿ ಈ ಎರಡು ಪಕ್ಷಗಳಿಗೆ ಸರಿಯಾದ ಪಾಠವನ್ನು ಕಲಿಸಲಿಕ್ಕಾಗಿ ಆಲ್ ಇಂಡಿಯ ಮಜಲೀಸ್ ಎ ಇತಿಹಾದ್ ವುಲ್ ಮುಸ್ಲಿಮೀನ್ ಪಣತೊಟ್ಟಿದೆ.
ಮೊಹಮ್ಮದ್ ಅಲಿ ಶೋಯಬ್
ಜಿಲ್ಲಾಧ್ಯಕ್ಷ, ಎ.ಐ.ಎಂ.ಐ.ಎಂ ದಾವಣಗೆರೆ