ಸತತವಾಗಿ ನಿರಂತರ ಮಳೆ ಸುರಿದ ಕಾರಣ ಹರಿಹರ ನಗರದ ಜೈ ಭೀಮ್ ನಗರದ ನಿವಾಸಿ ಇಸ್ಮೈಲ್ ಸಾಬ್ ಅವರ ಪುತ್ರಿ ಆಯೇಷಾ ಉಮ್ರ ಗೋಡೆ ಕುಸಿದು ತಲೆಗೆ ಪೆಟ್ಟು ಬಿದ್ದ ಕಾರಣ ದಾವಣಗೆರೆ ಜಿಲ್ಲಾ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು.
ಮಗುವಿನ ಆರೋಗ್ಯ ವಿಚಾರಿಸಲು ಇಂದು ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಜೆಡಿಎಸ್ ಮುಖಂಡರುಗಳಾದ ಮಂಜಣ್ಣ, ಮಾರುತಿ ಬೇಡರು, ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಯೋಗ ಕ್ಷೇಮದ ಬಗ್ಗೆ ವಿಚಾರಿಸಿ ಅವರ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.