ದಾವಣಗೆರೆ: ಕನ್ನಡ ರಾಜ್ಯೋತ್ಸವ ಗುರುಕುಲ ಶಾಲೆ

Spread the love

ದಾವಣಗೆರೆ: ಜಿಲ್ಲಾ ಆಡಳಿತದಿಂದ ಆಯೋಜಿಸಿದ.ಕನ್ನಡ ರಾಜ್ಯೋತ್ಸವ ಆಚರಣೆಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ

ಗುರುಕುಲ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಇಂಪನಾ ಕನ್ನಡ ರಾಜ್ಯೋತ್ಸವದ ವಿಶೇಷ ಭಾಷಣ ನೀಡಿದ ಪರಿಣಾಮ ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಅತಿಥಿಗಳಾದ ಸಂಸದ ಪ್ರಭಾ ಮಲ್ಲಿಕಾರ್ಜುನ್ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಇಂಪನಾಳ ಭಾಷಣದಿಂದ ಪ್ರಭಾವಿತರಾಗಿ, ಆಕೆಗೆ ವಿಶೇಷ ಉಡುಗೊರೆಯನ್ನು ನೀಡಿ ಆಶೀರ್ವಾದಿಸಿದ್ದಾರೆ. ಈ ಸಾಧನೆಗೆ ಶಾಲೆಯ ಮಂಡಳಿಯವರು, ಶಿಕ್ಷಕ ವೃಂದದವರು ಇಂಪನಾಳಿಗೆ ಅಭಿನಂದಿಸಿದರು ಹಾಗೆ ಅದೇ ರೀತಿ. ಗುರುಕುಲ ಶಾಲೆಯ ದಾವಣಗೆರೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗುರುಕುಲ ಶಾಲೆಯ ಅತ್ಯುತ್ತಮ ಸಾಧನೆ – 7 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಎಲ್ಲಾ ಪತ್ರಿಕೆಗಳಲ್ಲಿ ನಮ್ಮ ಶಾಲೆಯ ಸಾಧನೆಯನ್ನು ವಿಶೇಷವಾಗಿ ಪ್ರಕಟಿಸಲಾಗಿದೆ, ಇದು ನಮ್ಮ ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಪತ್ರಿಕೆ ಹಾಗೂ ಮಾಧ್ಯಮದ ಸ್ನೇಹಿತರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು.

ಈ ಯಶಸ್ಸಿನ ಹಿಂದೆ ನಮ್ಮ ಗುರುಕುಲ ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ, ಮತ್ತು ವಿದ್ಯಾರ್ಥಿಗಳ ಸಮಾನ ರೀತಿಯ ಪರಿಶ್ರಮ ಹಾಗೂ ಬದ್ಧತೆ ಸಹಕಾರವಾಗಿದೆ. ಶಾಲೆಯ ವ್ಯವಸ್ಥಾಪಕರ ಮಾರ್ಗದರ್ಶನದ ಜ್ಯೋತಿಯಲ್ಲಿ ಮತ್ತು ತಂಡದ ಒಗ್ಗಟ್ಟಿನ ಬಲದೊಂದಿಗೆ ನಾವು ಇನ್ನೂ ಹೆಚ್ಚಿನ ಸಾಧನೆಗಳತ್ತ ಗಮನಹರಿಸುತ್ತಿದ್ದೇವೆ.

ನಮ್ಮ ವಿದ್ಯಾರ್ಥಿಗಳು ಮುಂದಿನ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಗೌರವ ಗಳಿಸಲಿ ಎಂಬ ಆಶಯದೊಂದಿಗೆ, ಗುರುಕುಲ ಕುಟುಂಬದ ಪರವಾಗಿ ನಮಗೆ ಬೆಂಬಲ ನೀಡಿದ ಎಲ್ಲರಿಗೂ ಎಂದು ಗುರುಕುಲ ಶಾಲೆಯ ಸೆಕ್ರೆಟರಿ ಅಬ್ದುಲ್ ಆರ್ ಅವರು ಶಾಲಾ ಶಿಕ್ಷಕ ವೃಂದ ಹಾಗೂ ಪೋಷಕರಿಗೆ ಧನ್ಯವಾದಗಳು. ತಿಳಿಸಿದರು

Leave a Reply

Your email address will not be published. Required fields are marked *