ದಾವಣಗೆರೆ:ನಿಯಮ ಉಲ್ಲಂಘನೆ ಆರೋಪ ನಕ್ಷೆ ರದ್ದು ಮಾಡಿದ ಧೂಡಾ

Spread the love

ದಾವಣಗೆರೆ: ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆ ನಗರದ ಹೊರ ವಲಯದ ಆವರಗೆರೆಯ ಬಡಾವಣೆಯೊಂದರ ನಕ್ಷೆ ರದ್ದುಪಡಿಸಲು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ನಿರ್ಧಾರ ಕೈಗೊಂಡಿದೆ.

ಆವರಗೆರೆ ಗ್ರಾಮದ ಸರ್ವೇ ನಂ.227ರ 9 ಎಕರೆ 37ಗುಂಟೆ ಪ್ರದೇಶದದಲ್ಲಿ ನಿರ್ಮಾಣ ಮಾಡಿರುವ ಅಂಬಿಕಾ ಬಡಾವಣೆ, ನಿಯಮ ಬಾಹಿರವಾಗಿ ನಕ್ಷೆ ಸಿದ್ಧಪಡಿಸಿದ ಹಿನ್ನಲೆ ನಕ್ಷೆ ರದ್ದುಪಡಿಸಲು ತೀರ್ಮಾನಿಸಿದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2018ರ ಏಪ್ರಿಲ್ 2 ರಂದು ನಗರ ಯೋಜನಾ ಸದಸ್ಯರು ಹಾಗೂ ಆಯುಕ್ತರು ಸಹಿ ಮಾಡಿರುವ ನಕ್ಷೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ.
2024ರ ಸೆಪ್ಟಂಬರ್ 4ರಂದು ಈ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ‌. ಬಡಾವಣೆ ನಕ್ಷೆಯಲ್ಲಿ ಉದ್ಯಾನವನಕ್ಕೆ ಸ್ಥಳ ಕಾಯ್ದಿರಿಸದೇ ವಿವಾದಿತ ನಿವೇಶನಗಳು ಎಂದು ನಮೂದಿಸಲಾಗಿದೆ. ಈ ಬಡಾವಣೆಗೆ ಅಂತಿಮ ವಿನ್ಯಾಸ ಅನುಮೋದನೆಯಾಗಿರುವುದಿಲ್ಲ. ಆದ್ದರಿಂದ ಈ ಬಡಾವಣೆ ನಕ್ಷೆಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರುಆವರಗೆರೆ ಗ್ರಾಮದ ಸರ್ವೇ ನಂ.227ರ 9 ಎಕರೆ 37ಗುಂಟೆ ಪ್ರದೇಶದದಲ್ಲಿ ನಿರ್ಮಾಣ ಮಾಡಿರುವ ಅಂಬಿಕಾ ಬಡಾವಣೆ, ನಿಯಮ ಬಾಹಿರವಾಗಿ ನಕ್ಷೆ ಸಿದ್ಧಪಡಿಸಿದ ಹಿನ್ನಲೆ ನಕ್ಷೆ ರದ್ದುಪಡಿಸಲು ತೀರ್ಮಾನಿಸಿದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2018ರ ಏಪ್ರಿಲ್ 2 ರಂದು ನಗರ ಯೋಜನಾ ಸದಸ್ಯರು ಹಾಗೂ ಆಯುಕ್ತರು ಸಹಿ ಮಾಡಿರುವ ನಕ್ಷೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ.
2024ರ ಸೆಪ್ಟಂಬರ್ 4ರಂದು ಈ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ‌. ಬಡಾವಣೆ ನಕ್ಷೆಯಲ್ಲಿ ಉದ್ಯಾನವನಕ್ಕೆ ಸ್ಥಳ ಕಾಯ್ದಿರಿಸದೇ ವಿವಾದಿತ ನಿವೇಶನಗಳು ಎಂದು ನಮೂದಿಸಲಾಗಿದೆ. ಈ ಬಡಾವಣೆಗೆ ಅಂತಿಮ ವಿನ್ಯಾಸ ಅನುಮೋದನೆಯಾಗಿರುವುದಿಲ್ಲ. ಆದ್ದರಿಂದ ಈ ಬಡಾವಣೆ ನಕ್ಷೆಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು

Leave a Reply

Your email address will not be published. Required fields are marked *