ಹರಿಹರದಲ್ಲಿರುವ ಗ್ರಾಮಾಂತರ ಸಿಪಿಐ ಕಚೇರಿಗೆ ಮಂಗಳವಾರದಂದು ದಾವಣಗೆರೆ ಪೂರ್ವ ವಲಯದ ಐಜಿಪಿ ರಮೇಶ್ ಬಲೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹರಿಹರದ ಶಿವಮೊಗ್ಗ ಹರಪನಹಳ್ಳಿ ರಸ್ತೆಯಲ್ಲಿ ಶಾಲಾ ಅವಧಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ತೆಗೆದಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಹರಿಹರದ ಗಾಂಧಿ ವೃತ್ತದಲ್ಲಿ ವಾಹನ ಸಂಚಾರ ಸಿಗ್ನಲ್ ಅಳವಡಿಕೆಗೆ ದೂಡದಿಂದ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯದ ಉಮಾ ಪ್ರಶಾಂತ್ ಸಿಪಿಐ ಆದ ಸುರೇಶ್ ಸಗರಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.