ದಾವಣಗೆರೆ; ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ದಿನಾಂಕ 25-11-2024ರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಜಯದೇವ ಸರ್ಕಲ್ ನಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು ಕೆ.ಜಿ ಯ ಲ್ಲಪ್ಪ ಅವರು ಆದೇಶದ ಮೇರೆಗೆ ಹಮ್ಮಿಕೊಳ್ಳಲಾಗಿತ್ತುತಾಲೂಕು ಕಚೇರಿಯ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ 8 ವರ್ಷಗಳಾಗಿದ್ದು, ಇತ್ತೀಚೆಗೆ ಅಂದರೆ 2 ವರ್ಷಗಳ ಕೆಳಗೆ ಕಟ್ಟಡ ಕಾಮಗಾರಿಯು ಪೂರ್ಣಗೊಂಡಿದ್ದು, ಪೀಠೋಪಕರಣಗಳನ್ನು ಕೂಡ ಕಟ್ಟಡಕ್ಕೆ ಅಳವಡಿಸಲಾಗಿದೆ. ಆದರೆ ಇಲ್ಲಿಯವರೆಗೂ ನವೀಕರಣಗೊಂಡ ಕಟ್ಟಡವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಬಿಡುಗಡೆ ಮಾಡದೇ ರೈತರ ಭವನದ ಬಾಡಿಗೆ ಕೊಠಡಿಯಲ್ಲಿ ಬಾಡಿಗೆ ಪಾವತಿಸುವುದರ ಮೂಲಕ ಸ್ವಂತ ಕಟ್ಟಡವಿದ್ದರೂ ಸಹ ಹಣ ಪೋಲು ಮಾಡಲಾಗುತ್ತಿದೆ. ಮತ್ತು ಉದ್ಘಾಟನೆಯಾಗದ ಕಾರಣ ಈ ಕಟ್ಟಡವು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಮತ್ತು ಈ ಕಟ್ಟಡದ ಸೋರಿಕೆ ಶುರುವಾಗಿದೆ. ಹೊಸ ಕಟ್ಟಡ ಸೋರಿಕೆಗೆ ಕಳಪೆ ಕಾಮಗಾರಿಯಾಗಿದೆ ಎಂಬ ಶಂಕೆಯಿದ್ದು, ಉದ್ಘಾಟನೆಗೆ ವಿಳಂಬವಾಗುತ್ತಿದೆ ಎಂಬ ಅನುಮಾನವಿದೆ. ಅದಲ್ಲದೇ ಹಳೇ ಭಾಗದ, ನಗರ ಮತ್ತು ಗ್ರಾಮಾಂತರ ಜನರಿಗೆ ಅನುಕೂಲವಾಗುವ ಸ್ಥಳ ಬಿಟ್ಟು, ಇನ್ನೂ ಎಷ್ಟು ದಿನ ಬಾಡಿಗೆ ಕಟ್ಟಡದಲ್ಲಿ ಇರಬೇಕು. ಈ ಕಟ್ಟಡ ಉದ್ಘಾಟನೆಯಾದಲ್ಲಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಪಾಲಿಕೆ, ಉಪವಿಭಾಗಾಧಿಕಾರಿಗಳ ಕಚೇರಿಗಳು ಇದರ ಸಮೀಪಕ್ಕೆ ಬಂದಂತೆ ಆಗುತ್ತದೆ ಮತ್ತು ವಿದ್ಯಾರ್ಥಿಗಳು ಪ್ರಮಾಣ ಪತ್ರಕ್ಕಾಗಿ, ಜನ ಸಾಮಾನ್ಯರು ಪಡಿತರ ಚೀಟಿ ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲು ರೈತರ ಭವನಕ್ಕೆ ಪುನಃ ಆಟೋ ಚಾರ್ಜ್ ಕೊಟ್ಟು ಹೋಗಬೇಕಾಗುತ್ತದೆ.ಆದ್ದರಿಂದ ಈ ಕಟ್ಟಡವನ್ನು ಮೂಲ ಕಚೇರಿಯಲ್ಲಿ ಕೂಡಲೇ ಉದ್ಘಾಟನೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಕಟ್ಟಡವನ್ನು ಶೀಘ್ರ ಉದ್ಘಾಟನೆ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ವಾಹನ ಚಾಲಕರ ಜಿಲ್ಲಾ ಘಟಕದ ಅಧ್ಯಕ್ಷ ಇಸ್ಮಾಯಿಲ್ ಜಬಿವುಲ್ಲಾ ಹಾಗು ಜಿಲ್ಲಾಧ್ಯಕ್ಷರು ಬಾಬುರಾವ್ ತಿಳಿಸಿದರು ಈ ಸಂದರ್ಭದಲ್ಲಿ . ಮಹಬೂಬ್ ಬಾಷಾ ನವೀನ್ ಎಸ್ ಸೈಯದ್ ಶಾಬಾಜ್ ಚಂದ್ರಶೇಖರ್ ಗಣಪ ರಮೇಶ್ ಗಿರೀಶ್ ಕಲಂದರ್ ಖಾನ್ ಶಾರುಖ್ ಹಾಷ್ಮಿ ಹಾಗೂ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರಸಿದ್ಧರಿದ್ದರು