ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ.

Spread the love

ದಾವಣಗೆರೆ ನಗರದ ಜಯದೇವ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಹಾದು ಹೋಗುವ ಹದಡಿ ರಸ್ತೆಯು ಹಲವಾರು ದಿನಗಳಿಂದ ಹದಗೆಟ್ಟಿದ್ದು ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಮತ್ತು ಪಾದಚಾರಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ. ಹದಡಿ ರಸ್ತೆಯು ಅತೀ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಯಾಗಿದ್ದು, ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ವಿದ್ಯಾರ್ಥಿ ಭವನದ ವೃತ್ತದಲ್ಲಿರುವ ಹತ್ತಾರು ಗುಂಡಿಗಳು ವಾಹನ ಸಂಚಾರಕ್ಕೆ ತೀವ್ರ ತೊಂದರೆಯನ್ನುಂಟು ಮಾಡುತ್ತಿವೆ. ಅಲ್ಲಿ ಓಡಾಡುವಾಗ ಜನರು ಅಂಗೈಯಲ್ಲಿ ಜೀವವನ್ನು ಇಟ್ಟುಕೊಂಡು ಸಂಚರಿಸುವಂತಾಗಿದೆ. ಸುಮಾರು ಎರಡು ತಿಂಗಳಿನಿಂದಲೂ ಹದಡಿ ರಸ್ತೆಯಲ್ಲಿ ಗುಂಡಿಗಳಾಗಿದ್ದರೂ ಲೋಕೋಪಯೋಗಿ ಇಲಾಖೆಯವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಪ್ರತಿದಿನ ಇದೇ ರಸ್ತೆಯ ಮೂಲಕ ನೂರಾರು ಬಾರಿ ಹತ್ತಾರು ಆಸ್ಪತ್ರೆಗಳ ಅಂಬುಲೆನ್ಸ್‌ಗಳು ಸಾಗುತ್ತವೆ. ಈ ಅಂಬುಲೆನ್ಸ್‌ನಲ್ಲಿ ಜೀವನ್ಮರಣದ ಹೋರಾಟದಲ್ಲಿರುವ ರೋಗಿಗಳ ಗತಿ ಏನು? ಇಲಾಖೆಯು ಇಲ್ಲಿ ಪ್ರಾಣಬಲಿಯಾಗಲಿ ಎಂಬುದಕ್ಕೆ ಕಾಯುತ್ತಿದೆಯೇ? ಹಾಗೂ ನಿಮ್ಮ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಯ ಮೂಲಕ ಸಂಚರಿಸುವುದಿಲ್ಲವೇ? ನಿಮ್ಮ ಕಣ್ಣಿಗೆ ಈ ರಸ್ತೆಯ ದುರಾವಸ್ಥೆ ಕಾಣುತ್ತಿಲ್ಲವೇ? ಹದಡಿ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕೆಂದು ತೀವ್ರವಾಗಿ ಆಗ್ರಹಿಸುತ್ತೇವೆ. ತತ್‌ಕ್ಷಣವೇ ಕಾಮಗಾರಿಯನ್ನು ಪ್ರಾರಂಭಿಸದಿದ್ದರೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸುತ್ತಿದೆ. ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕೆ.ಜಿ. ಯಲ್ಲಪ್ಪ ಅವರು ತಿಳಿಸಿದರು ಈ ಸಂದರ್ಭದಲ್ಲಿ ಶಾರುಖ್ . ಅಣ್ಣೇಶ್. ಪೃಥ್ವಿ ರಮೇಶ್ ಕಿರಣ್ ಅವಿನಾಶ್ ರವಿ ಬಸವರಾಜ್ ಆನಂದ್ ಯತಿರಾಜ್ ನವೀನ್ ಪ್ರಶಾಂತ್ ಪ್ರವೀಣ್ ನಾಗರಾಜ್ ಸಾವಂತ್ ಜಬಿವುಲ್ಲಾ ಚಂದ್ರು ಚಂದ್ರಶೇಖರ್ ಕೆ ಗಣಪ್ಪ ಸಾಗರ್ ಗೋಕುಲ್ ನವೀನ್ ಚಿದಾನಂದ್ ಸುನಿಲ್ ವಿಶ್ವಾಸ್ ಕಲಂದರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *