ದಾವಣಗೆರೆ: ಶಿವಗಂಗಾ ಕನ್ವೆನ್ನನ್ ಹಾಲ್ ಹತ್ತಿರ ಇರುವ ಅಂಗಡಿ ಮುಂಭಾಗ ನಿಲ್ಲಿಸಿದ್ದ 10 ಲಕ್ಷ ಮೌಲ್ಯದ ಕಾರು ಕಳ್ಳತನವಾದ ಒಂದೇ ದಿನದಲ್ಲಿ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಆರೋಪಿಯನ್ನು ಹರಿಹದಲ್ಲಿ ಬಂಧಿಸಿ ಆತನಿಂದ ಅಂದಾಜು 10 ಲಕ್ಷ ರೂ. ಮೌಲ್ಯದ ಟೋಯೋಟಾ ಪಾರ್ಚುನರ್ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.ದಿನಾಂಕ 06.12.2024 ರಂದು ಚಂದನ್ ಹೆಚ್ ಎಂಬುವವರು ವಿದ್ಯಾ ನಗರ ಠಾಣೆಗೆ ಹಾಜರಾಗಿ ಕಾರು ಕಳ್ಳತನದ ದೂರು ನೀಡಿದ್ದರು. ತಾನು ಹಣ್ಣಿನ ವ್ಯಾಪಾರ ಮಾಡುತ್ತಿದ್ದು, ಬೆಳಿಗ್ಗೆ 6.00 ಗಂಟೆಗೆ KA05 ML1728 ನಂಬರಿನ ಟೊಯೋಟಾ ಪಾರ್ಚುನರ್ ಕಾರನ್ನು ಬಾಲಾಜಿ ಬಡಾವಣೆಯಲ್ಲಿರುವ ಶಿವಗಂಗಾ ಕನ್ವೆನ್ನನ್ ಹಾಲ್ ಹತ್ತಿರ ತನ್ನ ಸೆಲ್ಲರ್ ಇರುವ ಬಿಲ್ಡಿಂಗ್ ಮುಂಭಾಗ ನಿಲ್ಲಿಸಿ ಕಾರಿಗೆ ಹಣ್ಣಿನ ಟ್ರೇಗಳನ್ನು ತುಂಬಲು ತಮ್ಮ ಅಂಗಡಿ ಕೆಲಸ ಮಾಡುವ ಹುಡುಗನಿಗೆ ಹೇಳಿ, ಮನೆಗೆ ಸ್ನಾನಕ್ಕೆಂದು ಹೋಗಿದ್ದಾಗ ಯಾರೋ ಇಬ್ಬರು ಕಳ್ಳರು ಬೈಕಿನಲ್ಲಿ ಬಂದು ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಪತ್ತೆ ಮಾಡಿಕೊಡಿ ಎಂದು ದೂರು ದಾಖಲಿಸಿದ್ದರು.ಎಎಸ್ಪಿ ವಿಜಯಕುಮಾರ. ಎಂ. ಸಂತೋಷ್, ಎಂ. ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮತ್ತು ವಿದ್ಯಾನಗರ ಠಾಣೆ ನಿರೀಕ್ಷಕ ಶಿಲ್ಪಾ ವೈ.ಎಸ್ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವಿಶ್ವನಾಥ ಜಿ.ಎನ್ ವಿಜಯ ಎಮ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿ ದಾವಣಗೆರೆ ಹರಿಹರದಲ್ಲಿ ಬಂಧಿಸಿದ್ದು, ಆರೋಪಿತನಿಂದ ಅಂದಾಜು 10 ಲಕ್ಷ ರೂ KA05 ML1728 ನಂಬರಿನ ಟೋಯೋಟಾ ಪಾರ್ಚುನರ್ ಕಾರನ್ನು ವಶ ಪಡಿಸಿಕೊಂದಿದ್ದಾರೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ