ರಕ್ಷಣಾ ವೇದಿಕೆ ವತಿಯಿಂದ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಕಳೆದ 60-70 ವರ್ಷಗಳಿಂದ ಹರಿಹರ ನಗರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸುತ್ತಾ ಬಂದಿದ್ದು, ಬಹುತೇಕ ನಗರದ ಜನಸಂಖ್ಯೆ ಹೆಚ್ಚಳವಾಗಿದ್ದರಿಂದ ಸದರಿ ರುದ್ರಭೂಮಿ ಬಹಳಷ್ಟು ಚಿಕ್ಕದಾಗಿರುತ್ತದೆ. ಹೂತಿರುವ ಶವದ ಮೇಲೆ ಒಂದರಮೇಲೊಂದು ಶವ ತಂದು ಅಂತ್ಯಕ್ರಿಯೆ ನಡೆಸುತ್ತಿರುವುದು ಕಂಡು ಬಂದಿರುವುದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಪವ ಹಾಕಿ ಶವಸಂಸ್ಕಾರ ಮಾಡುತ್ತಿದ್ದಾರೆ. ಇದರಿಂದ ನಾಯಿಗಳು ರುದ್ರಭೂಮಿಯಲ್ಲಿ ಹೋಗಿ ಹೂತಾಗಿರುವ ಶವಗಳನ್ನು ಹೊರಗೆಳೆದು ತರುತ್ತಿದ್ದು, ಭದ್ರತೆ ಇಲ್ಲದಿರುವ ಕಾರಣ ಸದರಿ ರುದ್ರಭೂಮಿ ಬಹಳಷ್ಟು ಅವ್ಯವಸ್ಥೆಯ ಗುಡಾಗಿದ್ದು, ಬೃಹತ್ ಪ್ರಮಾಣದಲ್ಲಿ ಮರ ಗಿಡಗಳು ಬೆಳೆದು ನಿಂತಿರುತ್ತವೆ. ಇಲ್ಲಿನ ಮರದ ಮೇಲೆ ಹೈ ಬೆನ್ನನ್ ವಿದ್ಯುತ್ ವೈರ್‌ಗಳು ಹಾದು ಹೋಗಿದ್ದು, ಅಂತ್ಯಕ್ರಿಯೆಗೆ ಹೋದಂತಹ ಸಾರ್ವಜನಿಕರು ಮರವನ್ನು ಮುಟ್ಟದಾಗ ವಿದ್ಯುತ್ ಸ್ಪರ್ಶವಾಗುವ ಸಾಧ್ಯತೆ ಕೂಡ ಇರುತ್ತದೆ, ಗುದ್ದು ತೆಗೆಯಲು ಸ್ಥಳ ಇಲ್ಲದಂತಾಗಿರುತ್ತದೆ.ಆದುದರಿಂದ ದಯಮಾಡಿ ಈ ಬಗ್ಗೆ ಖುದ್ದು ಸ್ಥಳ ತನಿಖೆ ಕೈಗೊಂಡು ಈ ರುದ್ರಭೂಮಿ ಪಕ್ಕದಲ್ಲಿ ಖಾಲಿ ಜಾಗವಿದ್ದು, ಸದರಿ ಜಾಗವನ್ನು ಸರ್ಕಾರದ ವತಿಯಿಂದ ಅದಷ್ಟು ಬೇಗನೆ ಖರೀದಿಸಿ, ಸ್ಥಳೀಯ ಜನಸಂಖ್ಯೆಗೆ ಅನುಗುಣವಾಗಿ ರೂದ್ರಭೂಮಿ ಪ್ರದೇಶವನ್ನು ವಿಸ್ತಾರಗೊಳಿಸಿ ಸಾರ್ವಜನಿಕರಿಗೆ ಪವ ಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಆಗ್ರಹಿಸುತ್ತೇವೆ. ಅದಷ್ಟು ಬೇಗನೆ ಕ್ರಮ ಕೈಗೊಳ್ಳದಿದ್ದ? ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದರೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂಬ ಅಂಶವನ್ನು ತಮ್ಮ ಆದ್ಯ ಗಮನಕ್ಕೆ ತರಬಯಸಿರುತ್ತೇವೆ.ಎಂದು.ಹರಿಹರ ತಾಲೂಕು ಅಧ್ಯಕ್ಷರಾದ ವೈ ರಮೇಶ್ ಮಾನೆ, ತಿಳಿಸಿದರು ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರಾದ ಪ್ರೀತಮ್ ಬಾಬು, ಗೌರವ ಸಲಹೆಗಾರದ ಮಗ್ದುಮ್ ಬಿ, ವಕೀಲರಾದ ಹಾಲೇಶ್,ಅಲಿ ಅಕ್ಬರ್, ರಾಜು,ರುದ್ರೇಶ್, ಮಹೇಶ್, ಮಕ್ರಮ್, ಉಪಸ್ಥಿತರಿದ್ದರು*