ಕಳ ಪೆ ರಸ್ತೆ ಡಾಂಬರ್ ಕಾಮಗಾರಿ ಕಂಡು . ಶಾಸಕ ಬಸಂತಪ್ಪ ಗರಂ

Spread the love

ತಾಲೂಕಿನ ಹೆಮ್ಮನ ಬೇತೂರು ಕ್ರಾಸ್‌ನಿಂದ ದಾವಣಗೆರೆ ನಗರ ಪ್ರವೇಶಿಸುವ ರಸ್ತೆಯವರೆಗೆ ಕೈಗೊಂಡಿರುವ ತಾತ್ಕಾಲಿಕ ಡಾಂಬರು ರಸ್ತೆ ದುರಸ್ತಿ ಕಾಮಗಾರಿ ಸ್ಥಳಕ್ಕೆ ಶಾಸಕ ಬಸಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಇಂಜಿನಿಯರ್ ಇಬ್ಬರು ಸ್ಥಳದಲ್ಲಿ ಇರಲಿಲ್ಲ. ಕೆಲಸಗಾರರು ತಮಗೆ ತಿಳಿದಷ್ಟು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಡಾಂಬರು ಸವರುತ್ತಿದ್ದರು. ಇದನ್ನು ಕಂಡ ಶಾಸಕ ಕೆ.ಎಸ್.ಬಸವಂತಪ್ಪ ಕೆಲಸಗಾರರನ್ನು ತರಾಟೆಗೆ ತೆಗೆದುಕೊಂಡರುಗುತ್ತಿಗೆದಾರ ಮತ್ತು ಇಂಜಿನಿಯರ್ ಎಲ್ಲಿಗೆ ಹೋಗಿದ್ದಾರೆ. ನಿಮಗೆ ಎಷ್ಟು ಅಡಿ ಡಾಂಬರು ಹಾಕುವಂತೆ ತಿಳಿಸಿದ್ದಾರೆ. ನೀವು ರಸ್ತೆಯಲ್ಲಿ ಬಿದ್ದ ಗುಂಡಿಗಳಿಗೆ ಈ ರೀತಿ ಡಾಂಬರು ಹಾಕಿದರೆ ಕೆಲವೇ ನಿಮಿಷಗಳಲ್ಲಿ ಪುನಃ ಕಿತ್ತು ಕೈಗೆ ಬರುತ್ತದೆ. ನೀವು ಮಾಡುವ ಕೆಲಸ ಶಾಶ್ವತವಾಗಿ ಉಳಿಯಬೇಕು. ನೀವು ಮನಬಂದಂತೆ ಡಾಂಬರು ಹಾಕಿದರೆ ಡಾಂಬರು ಕಿತ್ತು ಪುನಃ ಗುಂಡಿಗಳು ಕಾಣುತ್ತವೆ. ಗುಣಮಟ್ಟ ರಸ್ತೆ ದುರಸ್ತಿ ಮಾಡಬೇಕು ಎಂದು ತಿಳಿಸಿದರುಅಲ್ಲದೇ ಸಂಬಂಧಪಟ್ಟ ಇಂಜಿನಿಯರ್ ಸಂಪರ್ಕಿಸಿ ನೀವು ಸ್ಥಳದಲ್ಲಿ ಇದ್ದು, ಡಾಂಬರು ರಸ್ತೆ ದುರಸ್ತಿ ಕಾಮಗಾರಿ ಮಾಡಿಸಬೇಕು. ಗುತ್ತಿಗೆದಾರನಿಗೆ ಹೇಳಿ ನೀವು ಸ್ಥಳಕ್ಕೆ ಬರದಿದ್ದರೆ, ಅವರು ತಿಳಿದಷ್ಟು ಡಾಂಬರು ಹಾಕಿ ಮನೆಗೆ ಕಡೆ ಹೋಗುತ್ತಾರೆ. ಈ ರೀತಿ ಮಾಡಿದರೆ ಸರ್ಕಾರದ ಹಣ ಪೋಲಾಗುತ್ತದೆ. ಪದೇ ಪದೇ ರಸ್ತೆ ದುರಸ್ತಿಗೆ ಎಲ್ಲಿಂದ ಹಣ ತರಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು

Leave a Reply

Your email address will not be published. Required fields are marked *