ಇಂದು ಭಾರತ ಕಮ್ಯೂನಿಸ್ಟ್ ಪಕ್ಷ ರಾಜ್ಯ ಮಂಡಳಿಯ ಕರೆಯ ಮೇರೆಗೆ ಅದಾನಿ ಕೇಸನ್ನು ಜಿಪಿಸಿಗೆ ವಹಿಸಲು ಹಾಗೂ ಕೇಂದ್ರದ ರೈತ ವಿರೋಧಿ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಚನ್ನಗಿರಿ ತಾಲೂಕ ಸಮಿತಿ ವತಿಯಿಂದ ಮಾನ್ಯ ರಾಷ್ಟ್ರಪತಿಗಳಿಗೆ ತಾಲೂಕು ತಹಸಿಲ್ದಾರರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿ.ಪಿ.ಐ ತಾಲೂಕು ಕಾರ್ಯದರ್ಶಿ ಮೊಹಮ್ಮದ್ ರಫೀಕ್ ತಾಲೂಕ್ ಸಹ ಕಾರ್ಯದರ್ಶಿ ಕಲ್ಲಿಗಾರ ರಫಿ ಉಲ್ಲಾ ತಾಲೂಕು ಕಟ್ಟಡ ಕಾರ್ಮಿಕ ಅಧ್ಯಕ್ಷರಾದ ಜೈನಲ್ಲ ಖಾನ್ ವಿ ಲೋಕೇಶ್ ಎಂ ಡಿ ರಫೀಕ್ ಉಬೇದುಲ್ಲಾ ಉಪಸ್ತಿತರಿದ್ದರು.