ಜಗಳೂರು (ದಾವಣಗೆರೆ ಜಿಲ್ಲೆ)ಕಲ್ಯಾಣ ಮಂಟಪಗಳಲ್ಲಿ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಜಗಳೂರು ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 3.96 ಲಕ್ಷ ಬೆಲೆ ಬಾಳುವ ಸ್ವತ್ತು ವಶಕ್ಕೆ ಪಡೆಯಲಾಗಿದೆ.ಡಿ.04 ರಂದು ರಾತ್ರಿ ಜಗಳೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶರಣಪ್ಪ ಎಂಬುವವರು 55 ಗ್ರಾಂ ಬಂಗಾರ ಮತ್ತು ಮೊಬೈಲ್, ಬ್ಲೂಟೂತ್ ಹೆಡ್ ಸೆಟ್ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಈ ಪ್ರಕರಣಕ್ಕೆ ಸಂಬಂದಿಸಿದಂತೆ ತಪ್ಪಿತಸ್ಥತರನ್ನು ಪತ್ತೆ ಹಚ್ಚಲು ಎಎಸ್ಪಿಗಳಾದ ವಿಜಯ ಕುಮಾರ್ ಎಂ. ಸಂತೋಷ್, ಜಿ.ಮಂಜುನಾಥ್ ಹಾಗೂ ಡಿವೈಎಸ್ಪಿ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ಜಗಳೂರು ಪೊಲೀಸ್ ನಿರೀಕ್ಷಕ ಶ್ರೀನಿವಾಸ ರಾವ್ ಎಂ, ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ಗಾದಿಲಿಂಗ ಹೆಚ್, ಶ್ರೀಮತಿ ಆಶಾ ಆರ್ ಹಾಗು ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು.ಈ ತಂಡವು ತನಿಖೆ ಕೈಗೊಂಡಿದ್ದು, ವಿವಿಧಡೆ ಸಿ.ಸಿ.ಟಿ.ವಿ ಪರಿಶೀಲಿಸಿ ಆರೋಪಿಯಗುರುತನ್ನು ಪತ್ತೆ ಮಾಡಹಚ್ಚಿದ್ದಾರೆ. ಆರೋಪಿ ಸಿದ್ದೇಶ (19) ಕೂಲಿ ಕೆಲಸ, ವಾಸ:ಬಸವಾಪುರ ಗ್ರಾಮ, ಜಗಳೂರು ತಾಲ್ಲೂಕು ಎಂದು ತಿಳಿದು ಬಂದಿದೆ. ಆರೋಪಿಯಿಂದ ಸುಮಾರು 03 ಲಕ್ಷದ 85 ಸಾವಿರ ಬೆಲೆ ಬಾಳುವ 55 ಗ್ರಾಂ ಬಂಗಾರದ ಆಭರಣಗಳು ಮತ್ತು 10.000/- ರೂ ಬೆಲೆ ಬಾಳುವ ರೆಡ್ ಮೀ ಕಂಪೆನಿಯ ಮೊಬೈಲ್, 1500/- ರೂ ಬೆಲೆ ಬಾಳುವ ಒಪ್ಪೋ ಕಂಪೆನಿಯ ಬ್ಲೂಟೂತ್ ನ್ನು ಜಪ್ತುಪಡಿಸಿಕೊಂಡಿದ್ದು, ಒಟ್ಟು 03.96.500/- ರೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನುನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.