ರಾಮನಗರಕ್ಕೆ ಸಾಗುವ ರಸ್ತೆ ಅವೈಜ್ಞಾನಿಕ ವಾಗಿ ನಿರ್ಮಾಣಗೊಂಡಿರುವ ಸೇತುವೆ ವಿಚಾರ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್ ಮನವಿ ಸಲ್ಲಿಸಿದರು

Spread the love

ನವದೆಹಲಿ / ದಾವಣಗೆರೆ: ಭೂಮಿಕ ನಗರದಿಂದ ರಾಮನಗರಕ್ಕೆ ಸಾಗುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಕೆಳ ಸೇತುವೆಯಿಂದ ಹಲವಾರು ಅಪಘಾತಗಳಿಗೆ ಹಾಗೂ ಟ್ರಾಫಿಕ್ ಜಾಂಗೆ ಕಾರಣವಾಗಿದೆ ಈ ಸೇತುವೆಯು ಬಹಳ ಕಿರಿದಾಗಿದ್ದು ರಾಜ್ಯ ಸಾರಿಗೆ ಸಂಸ್ಥೆಯ ಡಿಪೋ ಘಟಕಕ್ಕೆ ಹೋಗುವ ಭಾರಿ ವಾಹನಗಳು ಮತ್ತು ಆಸ್ಪತ್ರೆಯ ಆ್ಯಂಬುಲೆನ್ಸ್‌ಗಳು ಜತೆಯಲ್ಲಿ ಇತರೆ ಭಾರಿ ವಾಹನಗಳು ಸಾಗುತ್ತಿರುತ್ತವೆ. ಸೇತುವೆಯು 2x4x.4.5 ಮೀ. ವಿಸ್ತಾರ ಹೊಂದಿದ್ದು ಹಲವಾರು ಅವಘಡಗಳಿಗೆ ಕಾರಣವಾಗಿದೆ ಇದರ ಬಗ್ಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಪೊಲೀಸ್ ಇಲಾಖೆ, ರಾಜ್ಯ ರಸ್ತೆ ನಿಗಮ, ಲೋಕೋಪಯೋಗಿ ಇಲಾಖೆ, ಇತರೆ ಇಲಾಖೆಗಳಿಂದ ಮಾಹಿತಿ ತರಿಸಿ ಇದರ ಬಗ್ಗೆ ಸಂಸತ್ತಿನಲ್ಲಿ ಸಂಸದರು ಪ್ರಶ್ನಿಸಿದ್ದು ಇದರೊಂದಿಗೆ ಅತೀ ಶೀಘ್ರವೇ ಇದಕ್ಕೆ ಪರಿಹಾರವಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಲು ಕೇಂದ್ರ ಸಚಿವರಾದ ನಿತೀನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿ ಒತ್ತಡ ಹೇರಿದರು.

Leave a Reply

Your email address will not be published. Required fields are marked *