ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಸಿದ ಕೆ.ಪಿ.ಸಿ.ಸಿ. ಪರಿಶಿಷ್ಟ ವಿಭಾಗ ಜಿಲ್ಲಾ ಮಾಧ್ಯಮ ವಕ್ತಾರ ವಿನಾಯಕ್ B N

Spread the love

ಅಮಿತ್ಶಾ ತಮ್ಮ ಹೇಳಿಕೆ ಸಾರ್ವಜನಿಕವಾಗಿ ಮತ್ತು ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಶೋಷಿತ ದಮನಿತ ತುಳಿತಕೊಳಗಾದ ಸಮುದಾಯಗಳಿಗೆ. ಅಂಬೇಡ್ಕರ್ ರವರೆ ದೇವರು ನಿತ್ಯ ಸ್ಮರಣೆ. ನಮ್ಮ ಉಸಿರು ಇರುವವರೆಗೆ, ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ ಇರಲಿದೆ ಎಂದು ಕೆ.ಪಿಸಿ.ಸಿ ಪರಿಶಿಷ್ಠ ವಿಭಾಗದ ಜಿಲ್ಲಾಮಾದ್ಯಮ ವಕ್ತಾರ ವಿನಾಯಕ.ಬಿ.ಎನ್. ಬಾಬಾಸಾಹೇಬರ ಸಂವಿಧಾನ ಇಲ್ಲದಿದ್ದರೆ ದಮನಿತರು, ದೀನದಲಿತರು, ಬಡವರು ಮತ್ತು ದಲಿತರನ್ನು ಮನುವಾದಿಗಳು ಬದುಕಲು ಬಿಡುತ್ತಿರಲಿಲ್ಲ ಎಂದು ಕೆ.ಪಿಸಿ.ಸಿ ಪರಿಶಿಷ್ಠ ವಿಭಾಗದ ದಾವಣಗೆರೆ ಜಿಲ್ಲಾಮಾದ್ಯಮ ವಕ್ತಾರ ವಿನಾಯಕ.ಬಿ.ಎನ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಬಿಆರ್ ಅಂಬೇಡ್ಕರ್ ಅವರ ಭಾಷಣದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ವಾಪಸ್ ಪಡೆದು ರಾಜೀನಾಮೆ ಮತ್ತು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಬಿಜೆಪಿ ಸಂವಿಧಾನ ವಿರೋದಿ ಎಂದು ಸಾಬಿತಾಗಿದೆ ಪ್ರದಾನ ಮಂತ್ರಿ ಮೋದಿಯವರು ನೇರವಾಗಿ ಹೇಳದೆ ಅಮಿತ್ ಶಾ ಮುಂಖಾಮತರ ಇಂತಹ ಹೇಳಿಕೆಗಳನ್ನು ಹೇಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *