ಹರಿಹರ:ಅಮಿತ್ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ

Spread the love

ಸಂಸತ್ ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಬಗ್ಗೆ ಕೀಳು ಭಾವನೆಯ ಹೇಳಿಕೆ ಖಂಡನಿಯ.

ಸಂಸತ್ ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಬಗ್ಗೆ ಕೀಳು ಭಾವನೆಯ ಹೇಳಿಕೆ ಖಂಡನಿಯ.
—————————————-
ಹರಿಹರ : “ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವುದು ಈಗ ಶೋಕಿ ಆಗಿಬಿಟ್ಟಿದೆ. ಇಷ್ಟೊಂದು ಬಾರಿ ದೇವರ ಹೆಸರು ಹೇಳಿದ್ದರೆ ಏಳು ಜನ್ಮಗಳವರಿಗೆ ಸ್ವರ್ಗ ಪ್ರಾಪ್ತಿಆಗುತ್ತಿತ್ತು”ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ ನಲ್ಲಿ ಹೇಳುವುದರ ಮೂಲಕ ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯದ ಬಗ್ಗೆ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟು ಹೋರಾಡಿದ ಮಹಾನ್ ನಾಯಕ, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ರವರ ಬಗ್ಗೆ ಕೀಳು ಭಾವನೆ ವ್ಯಕ್ತಪಡಿಸಿದ್ದು ಅಕ್ಷಮ್ಯ ಅಪರಾಧ ಹಾಗೂ ಖಂಡನಿಯ ಎಂದು ಕಮ್ಯುನಿಸ್ಟ್ ಪಕ್ಷದ ಮುಖಂಡ ಎಚ್ ಕೆ ಕೊಟ್ರಪ್ಪ ಹೇಳಿದರು.
ಅವರು ಹರಿಹರ ತಾಲೂಕ್ ಭಾರತ ಕಮ್ಯುನಿಸ್ಟ್ ಪಕ್ಷ ಹಮ್ಮಿಕೊಂಡಿದ್ದ, ಅಮಿತ್ ಶಾ ರವರ ಹೇಳಿಕೆಯನ್ನು ಖಂಡಿಸಿ, ಅವರ ಗೃಹಮಂತ್ರಿ ಸ್ಥಾನವನ್ನು ವಜಾಗೊಳಿಸುವಂತೆ ಪ್ರತಿಭಟನೆ ಮೂಲಕ ತಾಲೂಕು ಕಛೇರಿ ಆವರಣಕ್ಕೆ ಬಂದಾಗ ಹೇಳಿದರು.
ದೇವಸ್ಥಾನದ ಗಂಟೆಗಳಿಕ್ಕಿಂತ ,ಶಾಲೆಯ ಗಂಟೆಗಳ ಶಬ್ದ ಹೆಚ್ಚಾಗಿ ಕೇಳಬೇಕೆಂಬ ಹಂಬಲವಿತ್ತು. ಧರ್ಮಕ್ಕಿಂತ ಶ್ರಮದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಡಾ.ಬಿಆರ್ ಅಂಬೇಡ್ಕರ್ ರವರು, ಬಸವಣ್ಣನವರ ಹೇಳಿಕೆಯಂತೆ ಕಾಯಕದಲ್ಲಿ ಕೈಲಾಸ ಎಂಬ ಬಗ್ಗೆ ಚಿಂತನೆ ಉಳ್ಳವರಾಗಿದ್ದರು. ಇಂತಹ ಮಹಾನ್ ವ್ಯಕ್ತಿ ಬಗ್ಗೆ ಹಗುರಾಗಿ ಮಾತನಾಡಿದ ಅಮಿತ್ ಶಾ ರವರು ತಕ್ಷಣವೇ ದೇಶದ ಕ್ಷಮೆ ಯಾಚಿಸಬೇಕು. ಪ್ರಧಾನಿ ಮೋದಿಯವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅಲ್ಲದೆ ಶೋಷಿತ ಸಮುದಾಯಗಳ ಜೀವನಮಟ್ಟ ಸುಧಾರಣೆಗೈದ ಅಂಬೇಡ್ಕರ್ ಅವರ ಬಗ್ಗೆ ಯಾರಾದರೂ ತಿರಸ್ಕಾರದ ಮಾತುಗಳನ್ನು ಆಡಿದರೆ, ಅಂತವರ ವಿರುದ್ಧ ಶೋಷಿತ ಸಮುದಾಯಗಳು ಸಿಡಿದೆಳುತ್ತೇವೆ ಎಂಬ ಬಗ್ಗೆ ಎಚ್ಚರವಿರಲಿಎಂದರು.
ತಹಸಿಲ್ದಾರ್, ಜಿಲ್ಲಾಧಿಕಾರಿ ರವರ ಮುಖಾಂತರ ರಾಷ್ಟ್ರಪತಿ ಭವನಕ್ಕೆ ಕಳಿಸುವ ಮನವಿಯನ್ನು ಶಿರಸ್ತೇದಾರ್ ರವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ತಾಲೂಕ ಕಾರ್ಯದರ್ಶಿ ಟಿಹೆಚ್ ನಾಗರಾಜಪ್ಪ, ಖಜಾಂಚಿ ಕುಮಾರ್ ನಾಯಕ್, ಕಾರ್ಮಿಕ ನಾಯಕರುಗಳಾದ ಎನ್ ಪರಮೇಶ್ವರಪ್ಪ, ಆರ್ ಹೆಚ್ ಚಂದ್ರಪ್ಪ, ಆರ್ ಎಚ್ ನಾಗರಾಜ್, ಹೆಚ್ ಸಿ ಮೈದೂರ್, ಕಾಂಗೈ ಮುಖಂಡರಾದ ಎಂ ಆರ್ ಸೈಯದ್ ಸಾನಉಲ್ಲಾ , ವೈ ರಘುಪತಿ, ಡಿಎಸ್ಎಸ್ ಮುಖಂಡರಾದ ಡಿ ಹನುಮಂತಪ್ಪ , ಹನುಮಂತಪ್ಪ ಕೊತ್ವಾಲ್ ಹಾಗೂ ಗಂಗಾಧರ್ ಕೊಟಗಿ, ಶ್ರೀನಿವಾಸ್ ಕೊಡ್ಲಿ, ಮೌಲಾಲಿ, ಕಿರಣ್, ಬುಡನ್ ಸಾಬ್, ರಫೀಕ್ ಇತರರಿದ್ದರು.ಹರಿಹರ : “ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೇಳುವುದು ಈಗ ಶೋಕಿ ಆಗಿಬಿಟ್ಟಿದೆ. ಇಷ್ಟೊಂದು ಬಾರಿ ದೇವರ ಹೆಸರು ಹೇಳಿದ್ದರೆ ಏಳು ಜನ್ಮಗಳವರಿಗೆ ಸ್ವರ್ಗ ಪ್ರಾಪ್ತಿಆಗುತ್ತಿತ್ತು”ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ ನಲ್ಲಿ ಹೇಳುವುದರ ಮೂಲಕ ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯದ ಬಗ್ಗೆ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟು ಹೋರಾಡಿದ ಮಹಾನ್ ನಾಯಕ, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ರವರ ಬಗ್ಗೆ ಕೀಳು ಭಾವನೆ ವ್ಯಕ್ತಪಡಿಸಿದ್ದು ಅಕ್ಷಮ್ಯ ಅಪರಾಧ ಹಾಗೂ ಖಂಡನಿಯ ಎಂದು ಕಮ್ಯುನಿಸ್ಟ್ ಪಕ್ಷದ ಮುಖಂಡ ಎಚ್ ಕೆ ಕೊಟ್ರಪ್ಪ ಹೇಳಿದರು.
ಅವರು ಹರಿಹರ ತಾಲೂಕ್ ಭಾರತ ಕಮ್ಯುನಿಸ್ಟ್ ಪಕ್ಷ ಹಮ್ಮಿಕೊಂಡಿದ್ದ, ಅಮಿತ್ ಶಾ ರವರ ಹೇಳಿಕೆಯನ್ನು ಖಂಡಿಸಿ, ಅವರ ಗೃಹಮಂತ್ರಿ ಸ್ಥಾನವನ್ನು ವಜಾಗೊಳಿಸುವಂತೆ ಪ್ರತಿಭಟನೆ ಮೂಲಕ ತಾಲೂಕು ಕಛೇರಿ ಆವರಣಕ್ಕೆ ಬಂದಾಗ ಹೇಳಿದರು.
ದೇವಸ್ಥಾನದ ಗಂಟೆಗಳಿಕ್ಕಿಂತ ,ಶಾಲೆಯ ಗಂಟೆಗಳ ಶಬ್ದ ಹೆಚ್ಚಾಗಿ ಕೇಳಬೇಕೆಂಬ ಹಂಬಲವಿತ್ತು. ಧರ್ಮಕ್ಕಿಂತ ಶ್ರಮದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಡಾ.ಬಿಆರ್ ಅಂಬೇಡ್ಕರ್ ರವರು, ಬಸವಣ್ಣನವರ ಹೇಳಿಕೆಯಂತೆ ಕಾಯಕದಲ್ಲಿ ಕೈಲಾಸ ಎಂಬ ಬಗ್ಗೆ ಚಿಂತನೆ ಉಳ್ಳವರಾಗಿದ್ದರು. ಇಂತಹ ಮಹಾನ್ ವ್ಯಕ್ತಿ ಬಗ್ಗೆ ಹಗುರಾಗಿ ಮಾತನಾಡಿದ ಅಮಿತ್ ಶಾ ರವರು ತಕ್ಷಣವೇ ದೇಶದ ಕ್ಷಮೆ ಯಾಚಿಸಬೇಕು. ಪ್ರಧಾನಿ ಮೋದಿಯವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅಲ್ಲದೆ ಶೋಷಿತ ಸಮುದಾಯಗಳ ಜೀವನಮಟ್ಟ ಸುಧಾರಣೆಗೈದ ಅಂಬೇಡ್ಕರ್ ಅವರ ಬಗ್ಗೆ ಯಾರಾದರೂ ತಿರಸ್ಕಾರದ ಮಾತುಗಳನ್ನು ಆಡಿದರೆ, ಅಂತವರ ವಿರುದ್ಧ ಶೋಷಿತ ಸಮುದಾಯಗಳು ಸಿಡಿದೆಳುತ್ತೇವೆ ಎಂಬ ಬಗ್ಗೆ ಎಚ್ಚರವಿರಲಿಎಂದರು.
ತಹಸಿಲ್ದಾರ್, ಜಿಲ್ಲಾಧಿಕಾರಿ ರವರ ಮುಖಾಂತರ ರಾಷ್ಟ್ರಪತಿ ಭವನಕ್ಕೆ ಕಳಿಸುವ ಮನವಿಯನ್ನು ಶಿರಸ್ತೇದಾರ್ ರವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ತಾಲೂಕ ಕಾರ್ಯದರ್ಶಿ ಟಿಹೆಚ್ ನಾಗರಾಜಪ್ಪ, ಖಜಾಂಚಿ ಕುಮಾರ್ ನಾಯಕ್, ಕಾರ್ಮಿಕ ನಾಯಕರುಗಳಾದ ಎನ್ ಪರಮೇಶ್ವರಪ್ಪ, ಆರ್ ಹೆಚ್ ಚಂದ್ರಪ್ಪ, ಆರ್ ಎಚ್ ನಾಗರಾಜ್, ಹೆಚ್ ಸಿ ಮೈದೂರ್, ಕಾಂಗೈ ಮುಖಂಡರಾದ ಎಂ ಆರ್ ಸೈಯದ್ ಸಾನಉಲ್ಲಾ , ವೈ ರಘುಪತಿ, ಡಿಎಸ್ಎಸ್ ಮುಖಂಡರಾದ ಡಿ ಹನುಮಂತಪ್ಪ , ಹನುಮಂತಪ್ಪ ಕೊತ್ವಾಲ್ ಹಾಗೂ ಗಂಗಾಧರ್ ಕೊಟಗಿ, ಶ್ರೀನಿವಾಸ್ ಕೊಡ್ಲಿ, ಮೌಲಾಲಿ, ಕಿರಣ್, ಬುಡನ್ ಸಾಬ್, ರಫೀಕ್ ಇತರರಿದ್ದರು.

Leave a Reply

Your email address will not be published. Required fields are marked *