ದಾವಣಗೆರೆ :ಸಾರಿಗೆ ನಿಯಮ ಉಲ್ಲಂಘನೆ ಆಟೋರಿಕ್ಷಾ ಮೇಲೆ ಪ್ರಕರಣ ದಾಖಲು . ದಂಡ ವಸೂಲಿ

Spread the love

ದಾವಣಗೆರೆ: ಸಾರಿಗೆ ನಿಯಮ ಉಲ್ಲಂಘನೆ ಆಟೋರಿಕ್ಷಾ ಮೇಲೆ ಪ್ರಕರಣ ದಾಖಲು . ದಂಡ ವಸೂಲಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಕಳೆದ ತಿಂಗಳಷ್ಟೇ ಆಟೋ ರಿಕ್ಷಾ ಚಾಲಕರಿಗೆ ಎಚ್ಚರಿಕೆ ನೀಡಿದ್ದರು. ಸಾರಿಗೆ ನಿಯಮ ಹಾಗೂ ಕಾನೂನು ಪಾಲನೆ ಮಾಡುವಂತೆ ಸೂಚನೆ ನೀಡಿದ್ದರು. ಆದ್ರೆ ಈಗ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.ದಾವಣಗೆರೆ ನಗರದಲ್ಲಿ ಸಂಚರಿಸುವ ಆಟೋರಿಕ್ಷಾ ಆಸನ ಸಾಮರ್ಥ್ಯಕ್ಕಿಂತ ಅಧಿಕ ಪ್ರಯಾಣಿಕರನ್ನು ಸಾಗಿಸುವುದು, ಮೀಟರ್ ಅಳವಡಿಸದೇ ಇರುವುದು ಅರ್ಹತಾ ಪತ್ರ (ಎಫ್.ಸಿ) ವಿಮೆ ಇಲ್ಲದೇ ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವುದನ್ನು ಕಂಡು ಬಂದ ಹಿನ್ನಲೆಯಲ್ಲಿ ನಿರಂತರವಾಗಿ ಪ್ರಕರಣ ದಾಖಲಿಸುವ ಮೂಲಕ ಆಟೋರಿಕ್ಷಾ ಚಾಲಕರಲ್ಲಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದು 164 ಆಟೋರಿಕ್ಷಾ ಮೇಲೆ ಪ್ರಕರಣ ದಾಖಲಿಸಿ ರೂ.2,65,600 ದಂಡ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *