ಹರಿಹರ ನಗರದ ಕರ್ನಾಟಕ ದಲಿತ ಸಂಘರ್ಷ ಸಮಿತಿ. ಮಹಾತ್ಮಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ 386 .20 20/21ಇವರ ಕೃಷ್ಣಪ್ಪ ಸ್ಮಾರಕ ಭವನ ಮೈತ್ರಿ ವನದಲ್ಲಿ ದಿನಾಂಕ 25/01. 2025 ಹಾಗೂ 26/೦1/2025 ರಂದು ಎರಡು ದಿನಗಳ ರಾಜ್ಯಮಟ್ಟದ ಕಾರ್ಯಗಾರ ಏರ್ಪಡಿಸಿದ್ದು ವಿವಿಧ ಜಿಲ್ಲೆಗಳಿಂದ ಸಾವಿರ ಸಂಖ್ಯೆಯಲ್ಲಿ ಕರ್ನಾಟಕದ ಸಂಘರ್ಷ ಸಮಿತಿಯ ಸದಸ್ಯರು ಆಗಮಿಸಿದ್ದರು. ರಾಜ್ಯ ಸಂಚಾಲಕರು ಹಾಗೂ ಸಂಘಟನಾ ಸಂಚಾಲಕರು ಹಲವು ಜಿಲ್ಲೆಗಳ ಸಂಚಾಲಕರು ಸಂಘಟನಾ ಸಂಚಾಲಕರು ಹಾಗೂ ಹರಿಹರ ತಾಲೂಕು ಸಂಚಾಲಕರು ಸಂಘಟನಾ ಸಂಚಾಲಕರು ಸದಸ್ಯರು ಹಾಗೂ ಎಲ್ಲ ಪದಾಧಿಕಾರಿಗಳು ಈ ದಿನ ಪ್ರೊಫೆಸರ್ ಬಿ ಕೃಷ್ಣಪ್ಪ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಭಾಗವಹಿಸಿದ್ದರು ಈ ಒಂದು ಸಂದರ್ಭದಲ್ಲಿ ರಾಜ್ಯ ಸಂಚಾಲಕರು ಮಾತನಾಡಿ ಕೃಷ್ಣಪ್ಪನವರ ಜನಪರ ಕಾಳಜಿ ಸಮಾಜದಲ್ಲಿ ಶೋಷಿತ ವರ್ಗಕ್ಕೆ ಸೇರಿದಂತಹ ದಲಿತರ ಜೀವನೋದ್ಧಾರಕೆ ಹಾಗೂ ದಲಿತರಿಗೋಸ್ಕರ ಕೃಷ್ಣಪ್ಪಾಜಿಯವರು ಹೋರಾಡಿದಂತ ವಿಷಯಗಳ ಬಗ್ಗೆ ಈ ಸಂದರ್ಭದಲ್ಲಿ ಸೇರಿದಂತ ಕಾರ್ಯಕರ್ತರಿಗೆ ಮಾನವರಿಕೆ ಮಾಡಿಕೊಟ್ಟರು ಮುಂದೆ ಕೃಷ್ಣಪ್ಪಾಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುಂದೆ ಸಾಗೋಣ ಹಾಗೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಶೋಷಣೆಗಳನ್ನು ಮೇಟ್ಟಿ ನಿಲ್ಲೋಣ ಎಂದು ಈ ಸಂದರ್ಭದಲ್ಲಿ ತಿಳಿಸಿದರುವರದಿ ಎಸ್ಎಂ ಜಾಕೀರ್ ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ