76ನೇ ಗಣರಾಜ್ಯೋತ್ಸವ ಅಂಗವಾಗಿ ಮುಸ್ಲಿಂ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣಾ ಕಾರ್ಯಕ್ರಮ

Spread the love

ದಾವಣಗೆರೆ : ನಗರದ ಮುಸ್ಲಿಮ್ ಎಜುಕೇಷನ್ ಫಂಡ್ ಅಸೋಸಿಯೇಷನ್ ವತಿಯಿಂದ ಹಾಸ್ಟೆಲ್ ಅವರಣದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣಾ ಕಾರ್ಯಕ್ರಮ ಹಾಗೂ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಿತು. ಎಂ.ಬಿ.ಬಿಎಸ್, ಬಿ.ಎ.ಎಂ.ಎಸ್, ಬಿ.ಇ. ಎಂ.ಎಸ್ಸಿ, ಬಿ.ಎಸ್ಸಿ, ಬಿ.ಸಿ.ಎ. ಬಿ.ಇಡಿ, ಡಿಪ್ಲೋಮಾ ಓದುತ್ತಿರುವ ಮುಸ್ಲಿಮ್ ಸಮುದಾಯದ 33 ವಿದ್ಯಾರ್ಥಿಗಳಿಗೆ ಸುಮಾರು 3.50 ಲಕ್ಷ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.ವಿಧಾನಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ವಿದ್ಯಾರ್ಥಿ ಮಾತನಾಡಿ, ವಿದ್ಯಾರ್ಥಿವೇತನ ಸೌಲಭ್ಯ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿದ ನಂತರ ಕಷ್ಟದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಇದೇ ರೀತಿ ಸಹಾಯ ಮಾಡುವಂತೆ ಕಿವಿಮಾತು ಹೇಳಿದರು. ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಆಡಳಿತಾಧಿಕಾರಿ ಸೈಯದ್ ಮೊಅಜಂ ಪಾಷಾ ಮಾತನಾಡಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಮುಸ್ಲಿಮ್ ಹಾಸ್ಟೆಲ್ ನಿಯಮದಂತೆ ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ನೀಡಲು ಸತತ ಮೂರು ತಿಂಗಳಿನಿಂದ ಹಾಸ್ಟೆಲ್ನ ಸಿಬ್ಬಂದಿ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದರು.ದಾವಣಗೆರೆ ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಮುಸ್ಲಿಮ್ ಹಾಸ್ಟೆಲ್ ನ ಉಸ್ತುವಾರಿ ಅಧಿಕಾರಿಯಾದ ಸೈಯದ್ ಮೊಅಜಂ ಪಾಷ ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಜಿಲ್ಲಾ ವಕ್ಪ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಮೀರ್ ಆಲಂ ಖಾನ್, ಸದಸ್ಯರಾದ ಅಬ್ದುಲ್ ಜಬ್ಬಾರ್ , ಮೊಹಸಿನ್ ಖಾನ್ ಹಾಗೂ ಶೇಖ್ ಅಹಮದ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *