ಹರಿಹರ :ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ದೇಶದಲ್ಲಿ ನಡೆಯುತ್ತಿದ್ದ ಅನಿಷ್ಠ ಪದ್ದತಿ ಎನ್ನಿಸಿಕೊಂಡಿದ್ದ, ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ, ದೇವದಾಸಿ ಪದ್ದತಿ, ಜಾತಿಯ ಹೆಸರಿನಲ್ಲಿ ಮಲ ಹೊರುವ ಪದ್ದತಿಗಳ ವಿರುದ್ದ ದ್ವನಿ ಎತ್ತಿದ ಏಕೈಕ ದಲಿತ ನಾಯಕರೆಂದರೆ ಪ್ರೋ| ಬಿ.ಕೃಷ್ಣಪ್ಪ ಎಂದು, ರಾಜ್ಯ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೋ.ಬಿ ಕೃಷ್ಣಪ್ಪ ಸ್ಥಾಪಿತ ಡಿಎಸ್ಎಸ್ನ ರಾಜ್ಯ ಪ್ರಚಾರ ಸಮಿತಿ ಅದ್ಯಕ್ಷರಾದ ಮುನಿಕೃಷ್ಣಪ್ಪ ಹೇಳಿದರು. ನಗರದ ಹೊರ ಭಾಗದ ರಾಷ್ಟ್ರೀಯ ಹೆದ್ದಾರಿ ೪೮ ರ ಪಕ್ಕದಲ್ಲಿರುವ ಮೈತ್ರಿ ವನ-ಸಾಂಸ್ಕೃತಿಕ ಕಲಾ ಭವನದಲ್ಲಿ ಶನಿವಾರ ನಡೆದ “ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೋ.ಬಿ ಕೃಷ್ಣಪ್ಪ ಸ್ಥಾಪಿತ ಸಂಘಟನೆಯ” ರಾಜ್ಯ ಮಟ್ಟದ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿದರು. ರಾಜ್ಯದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿರುವ ಪ್ರತಿ ವರ್ಷ ನಡೆಯುವ ಚಂದ್ರಗುತ್ತೆಮ್ಮ ದೇವಿ ಜಾತ್ರೆಯ ಸಮಯದಲ್ಲಿ ರಾಜ್ಯದ, ಹಾಗೂ ಅಕ್ಕ-ಪಕ್ಕದ ರಾಜ್ಯದ ಅನೇಕ ಮಹಿಳೆಯರನ್ನು ಚಂದ್ರಗುತ್ತಿ ಗ್ರಾಮದ ಹತ್ತಿರದಲ್ಲಿನ ಸಿಂಗಾರ ಹೊಳೆಯಿಂದ ದೇವಸ್ಥಾನದ ವರೆಗೆ ಸುಮಾರು, ೩ ಕಿ.ಮಿ ಉದ್ದದ ದಾರಿಯಲ್ಲಿ ನಡೆಸುತ್ತಿದ್ದ ಬೆತ್ತಲೆ ಸೇವೆಯ ಮೂಲಕ ದೇವದಾಸಿಯರನ್ನಾಗಿ ಬಿಡುವ ಅನಿಷ್ಠ ಪದ್ದತಿಯ ವಿರುದ್ದ ದ್ವನಿ ಎತ್ತಿದ ಮೊದಲ ಮಹಾ ನಾಯಕರೆಂದರೆ ದಿ.ಪ್ರೋ| ಬಿ ಕೃಷ್ಣಪ್ಪ ರವರು ಅಂದು ನಡೆಸಿದ ಹೋರಾಟ ಅವಿಸ್ಮರಣಿಯವಾದುದ್ದಾಗಿದೆ. ತುಳಿತಕ್ಕೊಳಗಾಗಿರುವ. ದಲಿತರೆನ್ನಿಸಿಕೊಂಡಿರುವ ನಾವೆಲ್ಲ ಶ್ರೇಷ್ಠರಲ್ಲಿಯೇ ಅತ್ಯಂತ ಶ್ರೇಷ್ಠರೆನ್ನಿಸಿಕೊಂಡಿರುವ ಬ್ರಾಹ್ಮಣರ ಮನೆಯಲ್ಲಿ ಪೂಜೆಗೊಳ್ಳುವ ದೇವರ ಪೋಟೋಗಳಿಗೆ ಪೂಜೆ ಸಲ್ಲಿಸುವುದನ್ನು ಬಿಟ್ಟು, ನಮ್ಮ ಏಳಿಗೆಗಾಗಿ ಹಗಲಿರುಳು ಶ್ರಮಿಸಿ ಅಮರರಾಗಿರುವ ನಮ್ಮ ದೇವರುಗಳಾದ ಅಂಬೇಡ್ಕರ್, ಬುದ್ದ, ಬಸವ, ಕಾನ್ಸಿರಾಮ್, ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ ಅವರುಗಳ ಫೋಟೋಗಳನ್ನು ಮನೆಗಳಲ್ಲಿಟ್ಟು ನಿತ್ಯ ಪೂಜಿಸಲು ದಲಿತರು ಮುಂದಾಗಬೇಕು. ಹಾಗೂ ಮಕ್ಕಳಿಗೆ ಅವರ ತತ್ವಸಿದ್ದಾಂತಗಳ ಕುರಿತು ತಿಳಿ ಹೇಳಬೇಕು. ೧೯೫೫ ರಲ್ಲಿ ಕಾಂಗ್ರೇಸ್ ಸರ್ಕಾರದ ಸಚಿವರಾಗಿದ್ದ ಅಂಬೇಡ್ಕರವರು, ತಂದೆಯ ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಪಾಲು ಸಿಗುವಂತೆ ಕಾಯ್ದೆ ಜಾರಿಗೆ ತರಲು ಒತ್ತಾಯಿಸಿದ್ದರು. ಆದರೆ, ಅವರಿಗೆ ಬಹುಮತ ಸಿಗದ ಕಾರಣ ಅಂದು ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿ ಚಳುವಳಿಯಲ್ಲಿ ಭಾಗವಹಿಸಿದ್ದರು. ಇಂದು ಕಾಂಗ್ರೇಸ್-ಬಿಜೆಪಿ ಸರ್ಕಾರಗಳು ಸಂವಿದಾನವನ್ನು ಉಳಿಸುತ್ತಾರೆಂಬ ನಂಬಿಕೆ ನಮಗಿಲ್ಲ. ಅಂಬೇಡ್ಕರ್ ಅವರು ರಚಿಸಿದ ಸಂವಿದಾನಕ್ಕೆ ಧಕ್ಕೆಯಾದಲ್ಲಿ ನಾವುಗಳೆಲ್ಲಾ ಸುಮ್ಮನಿರುವುದಿಲ್ಲವೆಂದು ಎಚ್ಚರಿಕೆ ನೀಡಿದರು. ರಾಜ್ಯ ಸಂಚಾಲಕ ಡಿ.ಆರ್ ಪಾಂಡುರಂಗ ಸ್ವಾಮಿ ಮಾತನಾಡಿ, ರಾಜ್ಯದ ಸಮಸ್ತ ದಲಿತರಿಗೆಲ್ಲಾ ದ್ವನಿಯಾಗಿ. ಹೋರಾಟದ ಮೂಲಕ ಸರ್ಕಾರದ ಕಣ್ಣು ತೆರೆಸಿರುವ ನಮ್ಮೆಲ್ಲರ ಕಣ್ಮಣಿ, ಅಂಹಿಸೆಯಿಂದ ಬಳಲುತ್ತಿದ್ದ ಸ್ತ್ರೀ ಪುರುಷರಿಗೆ ಮುಕ್ತಿ ಕೊಡಿಸಿದ ಮುಕ್ತಿದಾತ, ರಾಜ್ಯದ ದಲಿತರಲ್ಲಿ ಹೋರಾಟದ ಕಿಚ್ಚು ಹಚ್ಚಿದ ದಲಿತ ನಾಯಕ, ಕರ್ನಾಟಕದ ಅಂಬೇಡ್ಕರರೆಂದೆ ಖ್ಯಾತರಾಗಿದ್ದ ಪ್ರೋ| ಬಿ.ಕೃಷ್ಣಪ್ಪ ನವರನ್ನು ಕಳೆದುಕೊಂಡಿರುವ ನಾವಿಂದು ನೋವನ್ನು ಅನುಭವಿಸುತ್ತಿದ್ದೆವೆ. ರಾಜ್ಯದ ಸಮಸ್ತ ದಲಿತರಲ್ಲಿ ಹೋರಾಟದ ಕಿಚ್ಚು ಮರುಕಳಿಸಬೇಕೆಂದರೆ. ಅವರ ತತ್ವ ಆದರ್ಶಗಳನ್ನು ಪಾಲಿಸಬೇಕೆಂದರೆ. ರಾಜ್ಯದ ದಲಿತರೊಮ್ಮೆ ಇವರ ಸಮಾಧಿ ಇರುವ ಮೈತ್ರಿ ವನವೆಂಬ ಈ ಸ್ಥಳಕ್ಕೊಮ್ಮೆ ಬಂದು ದಿ.ಪ್ರೋ| ಬಿ.ಕೃಷ್ಣಪ್ಪನವರ ಸಮಾಧಿಗೆ ನಮಸ್ಕರಿಸಬೇಕು ಎಂದು ಹೇಳಿದರು. ರಾಜ್ಯ ಸಂಘಟನಾ ಸಂಚಾಲಕರುಗಳಾದ ಕೊಡಿಗಲ್ ರಮೇಶ್, ತರಿಕೆರೆ ಎನ್ ವೆಂಕಟೇಶ್, ಮಾರುತಿ ಬಿ ಹೊಸಮನಿ, ಎ.ಎಲ್ ಭಾಸ್ಕರ್, ಟಿ.ಎನ್ ಗೊವಿಂದಪ್ಪ, ಶಿವಾನಂದ ಎಂ ಸಾವಳಗಿ, ಭರಮಪ್ಪ, ಟಿ.ಎಂ ಅಂಜಯ್ಯ, ಹೆಚ್ ಮುನಿಯಪ್ಪ, ಸುನಿತಾ ರಾಜ್, ಭವಾನಿ ಎಂ.ವಿ ಬಾಳೆಹೊನ್ನೂರು, ತಿಪ್ಪಮ್ಮ, ಜಿಲ್ಲಾ ಸಂಚಾಲಕರುಗಳಾದ ಹರಮಗಟ್ಟ ರಂಗಪ್ಪ, ಆರ್ ಶ್ರೀನಿವಾಸ್, ಸತೀಶ್ ಭಟ್ಟರ್ಕಿ, ಯಶೋಧರ ಭಜಂತ್ರಿ ಸಂಗಮ್, ಹುಲಿಕುಂಟೆ ಅಶ್ವಥಪ್ಪ, ತಮ್ಮಣ್ಣ ಕಾನಗಡ್ಡಿ, ಹನುಮಂತಪ್ಪ ಡಿ, ವಿಭಾಗಿಯ ಸಂಚಾಲಕ ಕೃಷ್ಣಪ್ಪ ಕಡೂರು ಅವರುಗಳು ಪ್ರೋ| ಬಿ.ಕೃಷ್ಣಪ್ಪನವರ ಹೋರಾಟಗಳ ಕುರಿತು ಮಾತನಾಡಿದರು. ರಾಜ್ಯ ಸಮಿತಿ ಸದಸ್ಯರುಗಳಾದ ಆರ್.ಶಿವಕುಮಾರ್, ಎಂ.ಎಸ್ ಶಂಕರ್, ಸತೀಶ್ ಕಂಟಲಗೆರೆ, ತಾಲೂಕು ಸಮಿತಿ ಸದಸ್ಯರುಗಳಾದ ಯಮನೂರು ಆರ್.ಪಿ, ಸಂತೋಷ ಎನ್ ಜಿ, ಕರಿಬಸಪ್ಪ ಗಂಗನರಸಿ, ಪ್ರಕಾಶ ಎ.ಕೆ, ತಿಪ್ಪೇಶ ದೇವರೆಡ್ಡಿ, ರುದ್ರೇಶ ಚನ್ನಗಿರಿ, ಗಣೇಶ, ಹರೀಶ್ ಬೇತೂರು, ಚಿಕ್ಕಬಿದರಿ ನಾಗಪ್ಪ, ಫಕ್ಕಿರೇಶ್ ಯಾದವ ಇದ್ದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಸಮಸ್ತ ದಲಿತರು ಪ್ರೋ| ಬಿ.ಕೃಷ್ಣಪ್ಪನವರ ಸಮಾಧಿಗೆ ಪೂಜೆ ಸಲ್ಲಿಸಿ, ನಮಿಸಿದರು.
*ವರದಿ* *ಮೊಹಮ್ಮದ್ ಗೌಸ್* *ಸ್ಮಾರ್ಟ್ ನ್ಯೂಸ್ ಕನ್ನಡ* *ಹರಿಹರ*