ಹರಿಹರ : ವರ್ಷಕ್ಕೆ ಎರಡು ಬಾರಿ ವೇತನ ಕೊಟ್ಟರೆ ಬಿಸಿಯೂಟ ತಯಾರಕರು ಹೇಗೆ ಜೀವನ ಮಾಡುತ್ತಾರೆ ಎಂದು ಬಿಸಿಯೂಟ ತಯಾರಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು. ನಗರದ ತಾಲೂಕು ಕಚೇರಿಯ ಆವರಣದಲ್ಲಿ ಪ್ರತಿಭಟಿಸುವುದರ ಮೂಲಕ ಬಿಸಿಯೂಟ ತಯಾರಕರು ಉದ್ದೇಶಿಸಿ ತಹಸೀಲ್ದಾರ್ ಕೆಎಮ್ ಬಸರಾಜ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರುಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು ಐದನೇ ತಾರೀಕಿಗೆ ವೇತನ ಕೊಡಬೇಕೆಂದು ನಿಯಮ ಇದ್ದರೂ ಮಧ್ಯಾಹ್ನ ಉಪಹಾರ ಯೋಜನೆಯ ರಾಜ್ಯ ಮಟ್ಟದ ಅಧಿಕಾರಿಗಳ ನಿರ್ಲಕ್ಷತೆಯಿಂದ ಬಿಸಿ ಊಟ ತಯಾರಕರು ವರ್ಷಕ್ಕೆ ಎರಡು ಬಾರಿ ವೇತನ ಪಡೆಯುವಂತಾಗಿದೆ ಇದು ಹೀಗೆ ಮುಂದುವರೆದರೆ ಬಿಸಿಊಟ ತಯಾರಕರು ಜೀವನ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.ಗುರುವಾರ ಹರಿಹರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಹರಿಹರ ತಾಲೂಕು ಬಿಸಿಯೂಟ ತಯಾರಕರ ಸಂಘಟನೆ ಮಹಿಳೆಯರು ತಮಗೆ ಮುಂಬರುವ ಬಜೆಟ್ ನಲ್ಲಿ ಕನಿಷ್ಠ ವೇತನ ಜಾರಿಗೊಳಿಸಬೇಕು, ಅದಕ್ಕಿಂತ ಮೊದಲು ಏಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶ್ರೀಮತಿ ಪ್ರಿಯಾಂಕ ಗಾಂಧಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಬಿಸಿಯೂಟ ತಯಾರಕರಿಗೆ ಆರನೇ ಗ್ಯಾರೆಂಟಿಯಾಗಿ 6000 ವೇತನ ಕೊಡುವುದಾಗಿ ಭರವಸೆ ನೀಡಿದ್ದರು ಅದನ್ನು ಕೂಡಲೇ ಈಡೇರಿಸಬೇಕೆಂದು ಒಕ್ಕೊರಲ್ಲಿನಿಂದ ಬಿಸಿಊಟ ತಯಾರಕರು ಆಗ್ರಹಿಸಿದರು.ಬಿಸಿಯೂಟ ತಯಾರಕರ ಸಂಘಟನೆಯ ರಾಜ್ಯಾಧ್ಯಕ್ಷರಾದ ಹೊನ್ನಪ್ಪನವರು ಮಾತನಾಡಿ ಬರುವ ಫೆಬ್ರವರಿ ಒಂದನೇ ತಾರೀಕು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಯಾಗಲಿದ್ದು ಸದರಿ ಬಜೆಟ್ ನಲ್ಲಿ ಬಿಸಿಯೂಟ ತಯಾರಕರಿಗೆ ಕೇಂದ್ರ ಸರ್ಕಾರ ವಿವೇತನವನ್ನು ಹೆಚ್ಚುವರಿ ಮಾಡದೇ ಇದ್ದರೆ ಫೆಬ್ರವರಿ ಮೂರನೇ ತಾರೀಕು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಹರಿಹರ ತಾಲೂಕು ಎಐಟಿಯುಸಿ ಅಧ್ಯಕ್ಷರಾದ ಎಚ್ ಕೆ ಕೊಟ್ರಪ್ಪ, ಸಿಪಿಐ ತಾಲೂಕು ಕಾರ್ಯದರ್ಶಿ ಟಿ ಹೆಚ್ ನಾಗರಾಜ್ ಮತ್ತು ಸಂಘಟನೆಯ ಸಂಚಾಲಕರಾದ ಗದಿಗೇಶ ಪಾಳೇದ, ಎ ತಿಪ್ಪೇಶ್ ಮಾತನಾಡಿದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಸರೋಜಾ, ಹರಿಹರ ತಾಲೂಕ್ ಸಂಘಟನೆಯ ಮುಖಂಡರುಗಳಾದ ನಾಗವೇಣಿ, ಶೃತಿ, ವಿಶಾಲಮ್ಮ, ಗೌರಮ್ಮ ,ಮಂಗಳ, ಮಂಜುಳಾ, ಸುಧಾ ಸೇರಿದಂತೆ ಇತರರು ನೇತೃತ್ವ ವಹಿಸಿದ್ದರು.
*ವರದಿ* *ಮೊಹಮ್ಮದ್ ಗೌಸ್* *ಸ್ಮಾರ್ಟ್ ನ್ಯೂಸ್ ಕನ್ನಡ* *ಹರಿಹರ*