ತಾಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ ೮ ಮತ್ತು ೯ ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಾತ್ರೆಯ ನಿಮಿತ್ತ ಮಂಗಳವಾರ ಬೆಳಿಗ್ಗೆ ಹಂದರಕಂಬ ಪೂಜಾ ಕಾರ್ಯಕ್ಕೆ , ಶ್ರೀ ಪೀಠದ ಪೀಠಾಧಿಪತಿಗಳಾದ ಪ್ರಸನ್ನಾನಂದ ಶ್ರೀಗಳು ಚಾಲನೆ ನೀಡಿದರು. ೨೦೨೫ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ, ಶಾಂತಲಾ ಕೆ.ಎನ್ ರಾಜಣ್ಣ, ಹೊದ್ದಿಗೆರೆ ರಮೇಶ, ಧರ್ಮದರ್ಶಿಗಳಾದ ಕೆ.ಬಿ ಮಂಜುನಾಥ, ನಾಗರಾಜ ಹಳ್ಳಳ್ಳೆಪ್ಪನವರ, ರಾಣಿಬೆನ್ನೂರು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಚಂದ್ರಣ್ಣ ಬೇಡರ, ಚಂದ್ರಶೇಖರ ಪೂಜಾರ, ಮಹಿಳಾ ಜಿಲ್ಲಾ ಅಧ್ಯಕ್ಷೆ ವಿಜಯಶ್ರೀ, ಜಾತ್ರಾ ಸಮಿತಿಯ ನಗರಾಧ್ಯಕ್ಷೆ ಪಾರ್ವತಿ ಬೋರಯ್ಯ ಇನ್ನೂ ಮುಂತಾದವರು ಇದ್ದರು.
*ವರದಿ* *ಮೊಹಮ್ಮದ್ ಗೌಸ್* *ಸ್ಮಾರ್ಟ್ ನ್ಯೂಸ್ ಕನ್ನಡ* *ಹರಿಹರ*