ಹರಿಹರ ನಗರದಲ್ಲಿ ಈ ದಿನ ನಗರ ಠಾಣಾ ಪೊಲೀಸ್ ಇಲಾಖೆಯಿಂದ ಸ್ಕೂಲ್ ಟ್ರಿಪ್ ಆಟೋ ಚಾಲಕರಿಗೆ ಆಟೋ ಚಾಲನೆಯ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡರು ಈ ಸಂದರ್ಭದಲ್ಲಿ ಹರಿಹರ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಶ್ರೀಪತಿ ಗಿನ್ನಿಯವರ ಮುಂದಾಳತ್ವದಲ್ಲಿ ವಿಜಯ್ ಕುಮಾರ್ ಹಾಗೂ ರವಿಕುಮಾರ್ ಇವರ ಉಪಸ್ಥಿತಿಯಲ್ಲಿ. ಹರಿಹರ ನಗರ ಆಟೋ ಮಾಲಕರ ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷರು ಸಿದ್ದಲಿಂಗ ಸ್ವಾಮಿ. ಅವರು ಹಾಗೂ ಅಧ್ಯಕ್ಷರು ಮೋಹನ್ ಗೌಡರು. ಹಾಗೂ ಉಪಾಧ್ಯಕ್ಷರು ನಜೀರ್ ಅಹ್ಮದ್. ಪ್ರಧಾನ ಕಾರ್ಯದರ್ಶಿ. ಕೇಶವ್ ಹಾಗೂ ಸಹಕಾರದರ್ಶಿಗಳು ಎಲ್ ತಿಪ್ಪೇಶ್ .ಶೇಕ್ ಅಲ್ತಾಫ್ ಹಾಗೂ ನಿರ್ದೇಶಕರು ಹಾಗೂ ನಗರಸಭೆ ಸದಸ್ಯರು ಆದಂತ ಹನುಮಂತಪ್ಪನವರು ಹಾಗೂ ಮಂಜುನಾಥ್ ಅಗಡಿ. ರವರು ಹಾಗೂ ಸುಮಾರು 200 ರಿಂದ 250 ಜನ ಆಟೋ ಚಾಲಕರಿಗೆ ಆಟೋ ಪರವಾನಿಗೆ ಪತ್ರಗಳು ಅಂದರೆ ಎಫ್ ಸಿ ಇನ್ಸೂರೆನ್ಸ್ ಡ್ರೈವಿಂಗ್ ಲೈಸೆನ್ಸ್ ಇನ್ನು ಮುಖ್ಯವಾದ ದಾಖಲೆಗಳನ್ನು ಇಟ್ಟುಕೊಂಡು ಯೂನಿಫಾರ್ಮ್ ಹಾಕಿಕೊಂಡು ಆಟೋ ಚಾಲನೆ ಮಾಡಬೇಕು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಆಟೋಗಳಲ್ಲಿ ಹತ್ತಿಸಬಾರದು ಹಾಗೂ ಆಟೋಗಳಲ್ಲಿ ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಅವರ ಶಾಲಾ ಬ್ಯಾಗುಗಳನ್ನು ಹೊರಗೆ ಬಾರದಂತೆ ಆಟೋಗಳ ಮೇಲೆ ಕ್ಯಾರಿಯರ್ ಗಳನ್ನು ಅಳವಡಿಸಿಕೊಂಡು ಆಟೋಗಳನ್ನು ಚಾಲನೆ ಮಾಡಬೇಕು ಯಾವುದೇ ಅಪಘಾತಗಳು ಸಂಭವಿಸದಂತೆ ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಶ್ರೀಪತಿ ಗಿನ್ನಿಯವರು ತಿಳಿಸಿದರು ಎಲ್ಲಾ ಆಟೋ ಚಾಲಕರು, ಇವರ ಮಾತಿಗೆ ಬೆಂಬಲ ಸೂಚಿಸಿ ಇನ್ನು ಮುಂದೆ ನಾವು ಸೂಕ್ತ ಉಪಯುಕ್ತ ಚಾಲನೆಯನ್ನ ಮಾಡುತ್ತೇವೆ ಯಾವುದೇ ರೀತಿ ತೊಂದರೆಯಾಗುವುದಂತೆ ನೋಡಿಕೊಳ್ಳುತ್ತೇವೆ ಎಂದು ಎಲ್ಲಾ ಆಟೋ ಚಾಲಕರು ನಗರ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ತಿಳಿಸಿದರು