ಹರಿಹರ :ಶಾಖಾ ಗ್ರಂಥಾಲಯದಲ್ಲಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ ” ಜಿಲ್ಲಾ ಕೇಂದ್ರ ಗ್ರಂಥಾಲಯ ಹರಿಹರ ಶಾಖಾ ಗ್ರಂಥಾಲಯದಲ್ಲಿ ಶುಕ್ರವಾರ ರಂದು ಫ್ರೆಬ್ರುವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ರಾಜ್ಯದ ಎಲ್ಲಾ ಶಾಲಾ ಕಾಲೇಜು ಹಾಗೂ ಸರಕಾರಿ ಕಚೇರಿಗಳಲ್ಲಿ ಏಕಕಾಲದಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗುಡಿಸಿಕೊಳ್ಳುವಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು “ಸಾರ್ವಜನಿಕರು, ಓದುಗರು, ಸ್ಪರ್ಧಾತ್ಮಕ ಓದುಗರ ಮೂಲಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಖಾ ಪ್ರಭಾರಧಾರಕರಾದ ರವಿಕುಮಾರ್ ಅವರು ಆಚರಣೆಯ ಕುರಿತು ವಿವರಿಸಿದರು. ಓದುಗರಾದ ರಾಮಸ್ವಾಮಿ ಅವರು ಪ್ರತಿಜ್ಞಾವಿದಿ ಒಧಿಸಿದರು.ಈ ಸಮಯದಲ್ಲಿ ಸಂಜಯ್.ಪಿ. ಹಾಗೂ ಸಾರ್ವಜನಿಕರು,ಓದುಗರು, ಸ್ಪರ್ಧಾತ್ಮಕ ಓದುಗರಾದ ಪ್ರಮೋದ, ಪ್ರವೀಣ್, ಚಂದನಾ, ಪ್ರದೀಪ್, ಪ್ರಜ್ವಲ್ ಕೇಶವ ರೆಡ್ಡಿ ಉಪಸ್ಥಿತರಿದ್ದರು.ವರದಿ ಮೊಹಮ್ಮದ್ ಗೌಸ್ ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ