“ಪ್ರಜಾಪ್ರಭುತ್ವ ನೆಲೆಗೊಳ್ಳಲಿ ಫ್ಯಾಸಿಸಂ ಕೊನೆಗೊಳ್ಳಲಿ ಎಂಬ ಧ್ಯೇಯ ವಾಕ್ಯದೊಂದಿಗೆ 76ನೇ ಗಣರಾಜ್ಯೋತ್ಸವ ಪ್ರಯುಕ್ತಎಸ್ ಡಿ ಪಿ ಐ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.”ದಾವಣಗೆರೆ : ಜನವರಿ 26,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಎಸ್ ಡಿ ಪಿ ಐ ಜಿಲ್ಲಾ ಕಚೇರಿ ಹತ್ತಿರ ಪ್ರಜಾಪ್ರಭುತ್ವ ನೆಲೆಗೊಳ್ಳಲಿ ಫ್ಯಾಸಿಸಂ ಕೊನೆಗೊಳ್ಳಲಿ ಎಂಬ ಧ್ಯೇಯ ವಾಕ್ಯದೊಂದಿಗೆ 76ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಮಾಡಿ ತದನಂತರ ದಾವಣಗೆರೆಯ ಆಜಾದ್ ನಗರ 2ನೇ ಮುಖ್ಯ ರಸ್ತೆಯಲ್ಲಿ ಗಣರಾಜ್ಯೋತ್ಸವ ದ ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ಯಾಹಿಯ ರವರು ನೆರವೇರಿಸಿದರು.ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಜ್ ಅಹಮದ್,ಇಲ್ಲಿ ನಮ್ಮ ದೇಶವನ್ನು ಮೊದಲು ಮನುವಾದಿಗಳು ನಂತರ ರಾಜ ಆಡಳಿತ, ಮತ್ತು ಬ್ರಿಟಿಷರ ಗುಲಾಮಗಿರಿಯಿಂದ ದೇಶವು ಸ್ವತಂತ್ರವಾದ ನಂತರ ದೇಶವನ್ನು ಕಾಂಗ್ರೆಸ್ ಸಮೇತ ಬೇರೆ ಬೇರೆ ಪಕ್ಷಗಳು ದೇಶವನ್ನು ಮುನ್ನಡೆಸಿದವು ಆದರೆ ಕಳೆದ 10 ವರ್ಷಗಳಿಂದ ದೇಶವು ಫ್ಯಾಸಿಸ್ಟರ ಕೈಗೆ ಸಿಲುಕಿ ನಲುಗಿ ಹೋಗಿದೆ.ಈ ದೇಶವನ್ನು ಎಸ್ಸಿ ಎಸ್ಟಿ ಸಮೇತ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ಮತ್ತೊಮ್ಮೆ ದೊಡ್ಡಮಟ್ಟದ ಹೋರಾಟವನ್ನು ರೂಪಿಸಿ ಫ್ಯಾಸಿಸ್ಟರ ಸಂಕೋಲೆಯಿಂದ ಬಿಡುಗಡೆಗೊಳಿಸಲು ಒಂದಾಗಿ ರಾಜಕೀಯ ಅಧಿಕಾರ ಪಡೆಯಬೇಕೆಂದು ಕರೆ ನೀಡಿದರು.ಎಲ್ಲಿಯವರೆಗೆ ನಾವು ರಾಜಕೀಯ ಅಧಿಕಾರ ಪಡೆಯುವುದಿಲ್ಲವೋ ಅಲ್ಲಿಯವರೆಗೆ ಇದು ಅಸಾಧ್ಯ,1950 ಜನವರಿ 26ರಂದು ಸಂವಿಧಾನವನ್ನು ರಚಿಸಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ದೇಶಕ್ಕೆ ಸಮರ್ಪಿಸಿದರು, ಇದರ ಉದ್ದೇಶವೇ ದೇಶದಲ್ಲಿ ಪ್ರಜಾಪ್ರಭುತ್ವ ,ಸಮಸಮಾಜ ಮತ್ತು ಶೋಷಿತ ಸಮುದಾಯಗಳಿಗೆ ರಾಜಕೀಯ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಅಧಿಕಾರ ನೀಡುವುದಾಗಿತ್ತು. ಆದರೆ ಇಲ್ಲಿನ ವ್ಯವಸ್ಥೆಯಿಂದ ಅದು ಸಾಧ್ಯವಾಗಲಿಲ್ಲ ನಿತ್ಯ ನಿರಂತರ ಇಲ್ಲಿನ ಅಧಿಕಾರಿಶಾಹಿಗಳು ಇಲ್ಲಸಲ್ಲದ ಕಾನೂನುಗಳನ್ನು ರೂಪಿಸಿ ಜನಗಳ ಮೇಲೆ ಅವುಗಳನ್ನು ಹೇರಿ ಅವರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಅವರನ್ನು ಮತ್ತಷ್ಟು ಎಲ್ಲಾ ರೀತಿಯಲ್ಲಿ ದುರ್ಬಲಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮತ್ತು ಶ್ರೀ ಸ್ವಾಮಿ ವಿವೇಕಾನಂದ ಸ್ವಯಂ ಪ್ರೇರಿತ ರಕ್ತದಾನ ಕೇಂದ್ರ ಇವರ ಸಹಯೋಗದೊಂದಿಗೆ ಆಯೋಜಿಸಿರುವ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತವಾಗಿ ಎಲ್ಲರೂ ಭಾಗಿಯಾಗಿ ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ಕರೆ ನೀಡಿದರು.ಈ ಸಮಯದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಅರ್ ತಾಹೀರ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಮೋಹಸಿನ್ ಜಿಲ್ಲಾ ಕೋಶಾಧಿಕಾರಿ ಅಜರ್ ಬಾತಿ ಜಿಲ್ಲಾ ಸಮಿತಿ ಸದಸ್ಯರಾದ ಜಬಿ ಅಜಾದ್ ನಗರ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಸಮಿತಿ ಅಧ್ಯಕ್ಷರಾದ ಏಜಾಜ್ ಅಹಮದ್, ಕಾರ್ಯದರ್ಶಿ ಇಸಾಕ್ ಅಹಮದ್ ಮತ್ತು ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಸ್ಥಳೀಯರ ಮುಖಂಡರಾದ ಸೌದಿ ಮೊಹಮ್ಮದ ಸಾಬ್, ಝಬಿವುಲ್ಲಾ, ಹಸೆನ್ ಸಾಬ್ ಮತ್ತು ಇತರರು ಉಪಸ್ಥಿತರಿದ್ದರು.