ಭದ್ರಾವತಿ: ಮಸ್ಜಿದ್-ಎ-ಚೌಕ್ ಸುನ್ನಿ & ಹೆಚ್ಚುವರಿ ಆಸ್ತಿಗಳು, ಭದ್ರಾವತಿ ಟೌನ್ & ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇದರ 11 ಜನ ಸದಸ್ಯರ ಆಡಳಿತ ಮಂಡಳಿ ಚುನಾವಣೆಗೆ ಒಟ್ಟು 16 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ದಿನಾಂಕ: 13/10/2024 ರಂದು ಅಲ್-ಮಹಮೂದ್ ಬಾಲಕಿಯರ ಪಿಯು ಕಾಲೇಜಿನಲ್ಲಿ ಮತದಾನ ಕೇಂದ್ರವನ್ನಾಗಿ ಗುರುತಿಸಿ ಎರಡು (02) ಮತಗಟ್ಟೆಗಳನ್ನು ನಿಗದಿಪಡಿಸಿ ಮತದಾನ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಮತದಾನ ಪ್ರಕ್ರಿಯೆಯು ಬೆಳಿಗ್ಗೆ 08:೦೦ ಗಂಟೆಯಿಂದ ಪ್ರಾರಂಭಗೊಂಡು ಸಂಜೆ ೦4:೦೦ ಗಂಟೆಗೆ ಮುಕ್ತಾಯವಾಗಿರುತ್ತದೆ. ಒಟ್ಟು 556 ಮತದಾರರ ಪೈಕಿ ಒಟ್ಟು 472 ಮತದಾರರು ತಮ್ಮ ಮತಗಳನ್ನು ಚಲಾಯಿಸಿರುತ್ತಾರೆ. ಸಂಜೆ ೦5:೦೦ ಗಂಟೆಯಿಂದ ಮತಎಣಿಕೆ ಪ್ರಕಿಯೆಯನ್ನು ಕೈಗೊಂಡಿದ್ದು ಎರಡು (೦2) ಮತಗಟ್ಟೆಗಳಲ್ಲಿ ಏಕಕಾಲದಲ್ಲಿ ಮತಎಣಿಕೆ ಪ್ರಕ್ರಿಯೆಯು ೦6:15 ಗಂಟೆಗೆ ಮುಕ್ತಾಯದ ನಂತರ ವಿಜೇತರಿಗೆ ಸರ್ಟಿಫಿಕೇಟ್ ನೀಡುವ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಬಿಲ್ಕಿಸ್ ಬಾನು, ಮಾನ್ಯ ವಿಧಾನಪರಿಷತ್ ಶಾಸಕರು, ಕರ್ನಾಟಕ ಸರ್ಕಾರ ಇವರು ನೆರವೇರಿಸಿದರು. ವಿಶೇಷ ಆಹ್ವಾನಿತರಾಗಿ ಶ್ರೀ ಸೈಯದ್ ಮೆಹತಾಬ್ ಸರ್ವರ್, ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಚುನಾವಣಾಧಿಕಾರಿಗಳು, ಶ್ರೀ ಸೈಯದ್ ಜಮೀಲ್ ಅಹಮದ್, ಆಡಳಿತಾಧಿಕಾರಿ, ಮಸ್ಜಿದ್-ಎ-ಚೌಕ್ ಸುನ್ನಿ & ಹೆಚ್ಚುವರಿ ಆಸ್ತಿಗಳು, ಭದ್ರಾವತಿ ಟೌನ್ & ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಶ್ರೀ ಶೈಲ, ಪೊಲೀಸ್ ವೃತ್ತ ನಿರೀಕ್ಷಕರು, ಓಲ್ಡ್ ಟೌನ್, ಭದ್ರಾವತಿ, ಶ್ರೀ ಚಂದ್ರಶೇಖರ್ ನಾಯ್ಕ್, ಪೊಲೀಸ್ ಉಪನಿರೀಕ್ಷಕರು, ಓಲ್ಡ್ ಟೌನ್, ಭದ್ರಾವತಿ, ಶ್ರೀಮತಿ ಮುಬೀನಾ ಬಾನು, ಪ್ರಾಂಶುಪಾಲರು, ಅಲ್ ಮಹಮೂದ್ ಬಾಲಕಿಯರ ಪದವಿಪೂರ್ವ ಕಾಲೇಜು, ಭದ್ರಾವತಿ, ಶ್ರೀ ನಯಾಜ್ ಅಹಮದ್, ಉಪನ್ಯಾಸಕರು, ಅಲ್ ಮಹಮೂದ್ ಬಾಲಕಿಯರ ಪದವಿಪೂರ್ವ ಕಾಲೇಜು, ಭದ್ರಾವತಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.